ಧರ್ಮಸ್ಥಳ ಸಂಸ್ಥೆ ಕಾರ್ಯ ಮಾದರಿ

BRM CHANDRAPPA 13 (2)
Published on

ಭರಮಸಾಗರ: ಧರ್ಮಸ್ಥಳ ಸಂಸ್ಥೆಯ ಕಾರ್ಯ ನಾಡಿಗೆ ಮಾದರಿ ಆಗಿದ್ದು, ಜನ ಹಾಗೂ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಇಲ್ಲಿನ ಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಸಂಸ್ಥೆ ಆಯೋಜಿಸಿರುವ 1738ನೇ ಮದ್ಯವರ್ಜನ ಶಿಬಿರದ ಬುಧವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಕೆರೆ, ದೇಗುಲ, ಮಹಿಳೆಯರ ಅಭಿವೃದ್ಧಿಗೆ ಕಂಕಣ ತೊಟ್ಟಿರುವ ಸಂಸ್ಥೆ, ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಮದ್ಯವರ್ಜನ ಶಿಬಿರ ಆಯೋಜಿಸುತ್ತಿರುವುದು ಉತ್ತಮ ಎಂದರು.

ಯೋಜನಾಧಿಕಾರಿ ಎ.ಜಿ.ಪ್ರವೀಣ್ ಮಾತನಾಡಿದರು. ಶಿಬಿರಾಧಿಕಾರಿ ಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ, ಮೇಲ್ವಿಚಾರಕ ಮುಖೇಶ್, ಲೋಕೇಶ್ ನಾಯ್ಕ, ಮೀನಾಕ್ಷಮ್ಮ, ಶಾಂತಮ್ಮ, ಹನುಮಂತಪ್ಪ, ಭಾಗ್ಯಾ, ಶಿವಬಸವಯ್ಯ, ರಾಜು ಮಾಸ್ಟರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net