ಧರ್ಮಸ್ಥಳ ಸಂಘದ ಕಾರ್ಯ ಶ್ಲಾಘನೀಯ

1412
Published on

ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿರುವ ಕರೊನಾ ಸೋಂಕಿತರ ಚಿಕಿತ್ಸೆೆಗೆ ಅನುಕೂಲವಾಗಲೆಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ 3 ವೆಂಟಿಲೇಟರ್‌ಅನ್ನು ಕೊಡುಗೆಯಾಗಿ ನೀಡಿತು.

ಈ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಮಾತನಾಡಿ, ಕರೊನಾ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್ ಅತ್ಯಗತ್ಯವಾಗಿ ಬೇಕಿದೆ. ಜನರ ಸಮಸ್ಯೆಗೆ ಸ್ಪಂದಿಸಿ ಧರ್ಮಸ್ಥಳ ಸಂಘ ಪರಿಕರ ವಿತರಿಸಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಸಹಕರಿಸಿರುವ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ, ತಾಲೂಕು ಆರೋಗ್ಯಾಧಿಕಾರಿ ಶಿವಾನಂದ ಮಾಸ್ತಿಹೊಳಿ, ಚಾರುಕೀರ್ತಿ ಸೈಬಣ್ಣವರ, ಜಿ.ಪ್ರದೀಪ, ಪ್ರಭಾಕರ ನಾಯ್ಕ, ಎನ್.ಆರ್. ಮಂಜುನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net