

ಬೀದರ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜನಜಾಗೃತಿ ವೇದಿಕೆ ಬೀದರ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಕನ್ನಡಪರ ಸಂಘಟನೆ ಹೋರಾಟಗಾರ ವಿರೂಪಾಕ್ಷ ಗಾದಗಿ ಅವರನ್ನು ಜಿಲ್ಲಾಧ್ಯಕ್ಷ, ಶಾಲಿವಾನ್, ಗುರುನಾಥ ಗಡ್ಡೆ, ದತ್ತಾತ್ತೇಯ, ಶ್ರೀನಿವಾಸರಡ್ಡಿ, ಶಿವು ಲೋಖಂಡೆ, ರಾಜಕುಮಾರ ಪಸಾರ, ಮಲ್ಲಿಕಾಜರ್ುನ ಪಾಟೀಲ್ (ಉಪಾಧ್ಯಕ್ಷರು), ಪ್ರವೀಣಕುಮಾರ (ಕಾರ್ಯದಶರ್ಿ), ಶಾಮರಾವ್ ಸಿಂಗ್ (ಕಾನೂನು ಸಲಹೆಗಾರ), ಡಾ.ವಿದ್ಯಾಸಾಗರ (ವೈದ್ಯಕಿಯ ಸಲಹೆಗಾರ), ಸಂತೋಷ ಬಿಜಿ ಪಾಟೀಲ್ (ಮಾಧ್ಯಮ ಸಲಹೆಗಾರ) ಅವರನ್ನು ನೇಮಕ ಮಾಡಲಾಗಿದೆ.
ವೇದಿಕೆ ರಾಜ್ಯ ಕಾರ್ಯದಶರ್ಿ ವಿವೇಕ್ ವಿನ್ಸೆಂಟ್ ಪಾಯಸ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಬುರಗಿ ವಿಭಾಗದ ಪ್ರಾದೇಶಿಕ ನಿದರ್ೇಶಕ ಜಯಂತ ಪೂಜಾರಿ ನೇತೃತ್ವದಲ್ಲಿ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವೇದಿಕೆ ಅಸ್ತಿತ್ವಕ್ಕೆ ತಂದು ಪದಾಧಿಕಾರಿಗಳ ನೇಮಕ ಮಾಡಲಾಯಿತು.
ವಿನ್ಸೆಂಟ್ ಪಾಯಸ್ ಮಾತನಾಡಿ, ಸಮಾಜದ ಸ್ವಾಸ್ತ್ಯ ಹಾಳಾಗಲು ಪ್ರಮುಖ ಕಾರಣ ದುಶ್ಚಟ. ಈ ನಿಟ್ಟಿನಲ್ಲಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 1997ರಲ್ಲಿ ಜನಜಾಗೃತಿ ವೇದಿಕೆ ಆರಂಭಿಸಲಾಗಿದೆ. ಇದು ಸಾರ್ವಜನಿಕ ಹಿತಾಶಕ್ತಿ ಸಂಘಟನೆ. ಜಾತಿ, ಮತ, ಪಕ್ಷ ತಾರತಮ್ಯ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಯಂತ ಪೂಜಾರಿ ಮಾತನಾಡಿ, ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿದರು. ಯೋಜನೆ ಜಿಲ್ಲಾ ನಿದರ್ೇಶಕ ಪ್ರವೀಣಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.