ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸುವಂತೆ ಮನವಿ

29rajesh7
Published on

ಚಾಮರಾಜನಗರ: ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಐಎನ್‌ಎ) ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಸಂಘಟನೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಶಿಲ್ಪಾನಾಗ್ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಂರಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಘನತೆಗೆ ಧಕ್ಕೆಯುಂಟುಮಾಡಬೇಕು ಎಂಬ ಉದ್ದೇಶದಿಂದ ಕೆಲವರು ವ್ಯವಸ್ಥಿತವಾದ ಸಂಚನ್ನು ರೂಪಿಸಿದ್ದಾರೆ. ಸದ್ಯ ನಡೆಯುತ್ತಿರುವ ಪ್ರಕರಣಗಳನ್ನು ಧರ್ಮಸ್ಥಳ ದೇವಸ್ಥಾನದ ಸುತ್ತ ಕೇಂದ್ರಿಕರಿಸಿ ವ್ಯವಸ್ಥಿತವಾದ ಅಪಪ್ರಚಾರ ಎಸಗಲಾಗುತ್ತಿದೆ. ಲಕ್ಷಾಂತರ ರೂ, ಹಣವನ್ನು ಖರ್ಚುಮಾಡಿ, ಧರ್ಮಸ್ಥಳದ ವಿರುದ್ಧ ವಿವಿಧ ಸ್ವರೂಪದ ಎಐ ಕಿರಿಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಿದು ಬಿಡಲಾಗಿದೆ ಎಂದು ದೂರಿದರು.

ದೇಶದಲ್ಲಿ ನಿಷೇಧಗೊಂಡಿರುವ ಪಿಎ್ಐ ಸಂಘಟನೆಯ ರಾಜಕೀಯ ಆಯಾಮವೆಂದೇ ಗುರುತಿಸಿಕೊಂಡಿರುವ ಎಸ್‌ಡಿಪಿಐ ಎಂಬ ಮೂಲಭೂತವಾದಿ ರಾಜಕೀಯ ಪಕ್ಷ ಕೂಡ ಅಪಪ್ರಚಾರ ಮಾಡಿದವರ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದು ಜನಸಾಮಾನ್ಯರಲ್ಲಿ ಆತಂಕವನ್ನು ಉಂಟುಮಾಡಿದ್ದು, ರಾಷ್ಟ್ರೀಯ ಸುರಕ್ಷತೆಗೂ ಸವಾಲೊಡ್ಡುತ್ತಿದೆ. ಆಗಾಗಿ ಕೇಂದ್ರ ಸರ್ಕಾರವೂ ಈ ಕೂಡಲೇ ಮಧ್ಯಪ್ರವೇಶಿಸಿ ಎನ್‌ಐಎ ಹಾಗೂ ಇಡಿ ಮೂಲಕ ಧರ್ಮಸ್ಥಳ ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಸಂಘಟನೆಯ ದಕ್ಷಿಣ ಸೇವಾ ಪ್ರಮುಖ್ ರಾ.ಸತೀಶ್, ಜಿಲ್ಲಾಧ್ಯಕ್ಷ ಕೆ.ಬಾಲಸುಬ್ರಹ್ಮಣ್ಯ, ಕಾರ್ಯದರ್ಶಿ ಮಧು, ಸಹಕಾರ್ಯದರ್ಶಿ ಶ್ರೀನಿವಾಸ್, ಭಜರಂಗದಳ ಸಹ ಸಂಯೋಜಕ ರಮೇಶ್ ನಾಯಕ್, ಜಿಲ್ಲಾ ಗೋ ರಕ್ಷಾ ಪ್ರಮುಖ್ ಶಂಕರ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net