

ಕೆ.ಆರ್.ಪೇಟೆ: ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನಾಮಧಾರಿ ಸಮುದಾಯ ಭವನದ ನೂತನ ಕಟ್ಟಡದ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಮಂಜೂರಾಗಿದ್ದ ಮೂರು ಲಕ್ಷ ರೂ. ಮೊತ್ತದ ಚೆಕ್ ಅನ್ನು ಸಂಘದ ಪದಾಧಿಕಾರಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ವಿತರಿಸಿದರು.
ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ದೇವಾಲಯ ನಿರ್ಮಾಣದ ಅಧ್ಯಕ್ಷ ಎಂ.ಪಿ.ದೊಡ್ಡತಮ್ಮಯ್ಯ, ಕಾರ್ಯದರ್ಶಿ ಕನಗನಹಳ್ಳಿ ಮಂಜು, ಖಜಾಂಚಿ ಪುಟ್ಟಬಸವೇಗೌಡ, ಸಹಕಾರ್ಯದರ್ಶಿ ಎಂ.ಟಿ.ಸ್ವಾಮಿ, ನಿರ್ದೇಶಕರಾದ ಸಿದ್ದೇಗೌಡ, ನಾಗರಾಜು, ಟಿ.ಶ್ರೀನಿವಾಸ್, ವಿಜಯೇಂದ್ರ, ಸತೀಶ್, ಪಾಲಾಕ್ಷ, ಕೃಷ್ಣೆಗೌಡ, ಮರಿಕಾಳೆಗೌಡ, ವಕೀಲ ವೆಂಕಟೇಶ್ ಇದ್ದರು.