ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಆಯುಧಪೂಜೆ

HUN-OCT-24-2(DHARMASTHALA YOJANE PROGRAMME)
ಹುಣಸೂರು ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ಯೋಜನಾಧಿಕಾರಿ ಧನಂಜಯ್, ಆರ್.ಆನಂದ್, ಮೇಲ್ವಿಚಾಕರರು ಹಾಗೂ ಸಿಬ್ಬಂದಿ ಇದ್ದರು.
Published on

ಹುಣಸೂರು: ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿ ಆವರಣದಲ್ಲಿ ಶನಿವಾರ ಆಯುಧ ಪೂಜೆ, ಗಣಹೋಮ ಮತ್ತು ಲಕ್ಷ್ಮೀಪೂಜೆ ಆಯೋಜಿಸಲಾಗಿತ್ತು.

ನಗರದ ಎರಡೂ ಶಾಖೆಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ಸ್ತ್ರೀ ಶಕ್ತಿಯ ಸಶಕ್ತತೆಗೆ ದುಡಿಯುತ್ತಿರುವ ಕಾರ್ಯ ಅಮೋಘವಾದದ್ದು. ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಯೋಜನೆ ವತಿಯಿಂದ ಸ್ಥಾಪಿಸುವ ಮೂಲಕ ಸರ್ಕಾರ ಹೆಗಲಿಗೆ ಹೆಗಲುಕೊಟ್ಟು ನಿಂತಿರುವುದು ಜನಪ್ರತಿನಿಧಿಗಳಿಗೆ ನೈತಿಕ ಬೆಂಬಲ ಸಿಕ್ಕಂತಾಗಿದೆ. ತಾಲೂಕಿನ ಬಡಜನರಿಗೆ ಯೋಜನೆಯ ವತಿಯಿಂದ ಇನ್ನಷ್ಟು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಬಲ ಸಿಗಲಿ ಎಂದು ಹಾರೈಸಿದರು.

ಯೋಜನಾಧಿಕಾರಿಗಳಾದ ರಮೇಶ್, ಧನಂಜಯ್, ಎರಡೂ ಶಾಖೆಗಳ ಮೇಲ್ವಿಚಾರಕರು, ಲೆಕ್ಕಾಧಿಕಾರಿಗಳು, ಸಿಬ್ಬಂದಿ ಮತ್ತು ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net