

ನಿಪ್ಪಾಣಿ: ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಬಗ್ಗೆ ಆಗುತ್ತಿರುವ ಅಪಪ್ರಚಾರಕ್ಕೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ನಿಪ್ಪಾಣಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದದ ತಾಲೂಕು ಘಟಕದಿಂದ ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮುಜಫರ್ ಬಳಿಗಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ, ಧರ್ಮಸ್ಥಳದ ಸಂಘದ ಕಾರ್ಯ ಸಮಾಜದ ಪರವಾಗಿದ್ದು, ಅದರ ಕುರಿತು ಸುಳ್ಳು ಆರೋಪ ಮಾಡಬಾರದು. ಶೀಘ್ರದಲ್ಲೆ ಸತ್ಯದ ಬಾಗಿಲು ತೆರೆಯಲಿದೆ. ಧರ್ಮಸ್ಥಳದ ಧರ್ಮದ ಬೆಳಕು ಬೆಳಗಲಿದೆ. ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರದ ಜತೆ ನಾವಿದ್ದೇವೆ. ಕ್ಷೇತ್ರವನ್ನು ಅಪವಿತ್ರಗೊಳಿಸಲು ಬಿಡುವುದಿಲ್ಲ. ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುವ ಷಡ್ಯಂತ್ರಗಳಿಗೆ ರಾಜ್ಯ ಸರ್ಕಾರ ಧರ್ಮಸ್ಥಳದ ಹೆಸರಿನಲ್ಲಿ ಆಸಕ್ತ ಹಿತಾಸಕ್ತಿಗಳು ಸೃಷ್ಟಿಸಿರುವ ಗೊಂದಲಕ್ಕೆ ಅಂತಿಮ ತೆರೆ ಎಳೆಯುವ ನಿಟ್ಟಿನಲ್ಲಿ ಈವರೆಗಿನ ಎಸ್‌ಐಟಿ ತನಿಖೆ ವರದಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ನಗರಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸದಸ್ಯ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಸ್ಥಳೀಯ ಹಾಲಸಿದ್ಧನಾಥ ಶುಗರ್ಸ್ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸುನೀಲ ಪಾಟೀಲ, ರವೀಂದ್ರ ಶೆಟ್ಟಿ, ಎಸ್.ಎಸ್. ಢವಣೆ, ಯೋಗಿತಾ ಘೋರ್ಪಡೆ, ಲಕ್ಷ್ಮಿ ಖೋತ, ವಿಭಾವರಿ ಖಾಂಡಕೆ, ನಗರಸಭೆ ಸದಸ್ಯರು, ಕಾರ್ಖಾನೆಯ ಸಂಚಾಲಕರು ಇತರರಿದ್ದರು.