ಧರ್ಮವು ಸತ್ಯಾನ್ವೇಷಣೆಯ ಉತ್ಕೃಷ್ಟ ಜೀವನ ವಿಧಾನ

25 HBL (RAYACHOTI) -
Published on

ಹುಬ್ಬಳ್ಳಿ: ಮನುಷ್ಯನ ಮನಸ್ಸನ್ನು ವಿಕಾಸಗೊಳಿಸುವಲ್ಲಿ ಧರ್ಮ ಸಿದ್ಧಾಂತಗಳ ವಿಸõತ ಚಿಂತನೆ ಕೇಂದ್ರೀಕೃತವಾಗಿದೆ. ಧರ್ಮವೆಂದರೆ ಅದು ಸತ್ಯಾನ್ವೇಷಣೆಯ ಉತ್ಕೃಷ್ಟ ಜೀವನ ವಿಧಾನ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಆಂಧ್ರಪ್ರದೇಶ ರಾಜ್ಯದ ರಾಯಚೋಟಿ ಕ್ಷೇತ್ರದ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ದಶವಾರ್ಷಿಕೋತ್ಸವದ ಅಂಗವಾಗಿ ಹುಬ್ಬಳ್ಳಿ ಮಹಾನಗರದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿ ಹಮ್ಮಿಕೊಂಡಿರುವ ವಿವಿಧ ಧಾರ್ವಿುಕ ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಿ ಶ್ರೀಗಳು ಆಶೀವರ್ಚನ ನೀಡಿದರು.

ಪವಿತ್ರ ಕ್ಷೇತ್ರಗಳಲ್ಲಿ ಜರುಗುವ ವಿಭಿನ್ನ ನೆಲೆಯ ಧಾರ್ವಿುಕ ಕೈಂಕರ್ಯಗಳು ಬದುಕನ್ನು ಹಸನುಗೊಳಿಸಿ ಮನುಕುಲದ ಬದುಕಿಗೆ ಸಾತ್ವಿಕ ಪರಂಪರೆ ಕರುಣಿಸುವ ಉದ್ದೇಶ ಹೊಂದಿವೆ ಎಂದರು.

ಮೌಲ್ಯಗಳ ಅರಿವಿನ ಬೆಳಗನ್ನು ಮನುಷ್ಯನ ಬಾಳಪಥಕ್ಕೆ ತುಂಬಿ ಅವುಗಳ ಯತಾರ್ಥ ಆಶಯ ಅರಿತು ಮುನ್ನಡೆಯಲು ಮಾರ್ಗದರ್ಶನ ಮಾಡಿರುವ ಹಿರಿಮೆ ಧರ್ಮ ಸಿದ್ಧಾಂತಗಳಿಗಿದೆ. ಮನುಷ್ಯನ ಸಾಕ್ಷಾತ್ಕಾರ ಸಂಪಾದನೆಗೆ ಮಾರ್ಗದರ್ಶನ ಮಾಡುವಲ್ಲಿ ವೀರಶೈವ ಧರ್ಮವು ತನ್ನ ವಿಸõತ ಸಿದ್ಧಾಂತಗಳಲ್ಲಿ ಪ್ರತಿಪಾದಿಸಿದೆ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

ತುಮಕೂರು ಜಿಲ್ಲೆ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬ್ರಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಜಿಲ್ಲೆ ಕಿಲ್ಲೆ ಸಾವಿರದೇವರ ಸಂಸ್ಥಾನ ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ತಾಲೂಕು ಸಂಪಗಾಂವ ಕಟಾಪುರಿ ಹಿರೇಮಠದ ಶ್ರೀ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ನಂದ್ಯಾಲದ ಬೃಹ್ಮಶ್ರೀ ನಂದುಲಮಠದ ಶಶಿಭೂಷಣ ಸಿದ್ಧಾಂತಿಗಳು ಪಾಲ್ಗೊಂಡಿದ್ದರು.

ಹುಬ್ಬಳ್ಳಿ ವೀರಭದ್ರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ರಮೇಶ ಉಳ್ಳಾಗಡ್ಡಿ, ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ಪಿ.ಎಂ. ಚಿಕ್ಕಮಠ, ಪ್ರಕಾಶ ಅಂದಾನಿಮಠ, ಶಂಕರ ಕುರ್ತಕೋಟಿ, ಅನಿಲ ಉಳ್ಳಾಗಡ್ಡಿ, ರಾಚಯ್ಯ ಮಠಪತಿ, ಎಂ.ಐ. ದೇಶನೂರ, ಶಿವಾನಂದ ನಾಗಠಾಣ, ಗಂಗಾಧರ ಹಿರೇಮಠ, ರಮೇಶಕುಮಾರ ಬುಡರಕಟ್ಟಿಮಠ, ಗಂಗಾಧರ ನಾಗಠಾಣ, ಮಹೇಶ ಸೂಡಿ, ಮಲ್ಲಿಕಾರ್ಜುನ ಕುರ್ತಕೋಟಿ ಇದ್ದರು.

ಅಡ್ಡಪಲ್ಲಕ್ಕಿ ಮಹೋತ್ಸವ
ರಾಯಚೋಟಿ ಕ್ಷೇತ್ರದ ಶ್ರೀವೀರಭದ್ರಸ್ವಾಮಿ ರಥೋತ್ಸವದ ದಶವಾರ್ಷಿಕೋತ್ಸವದ ಅಂಗವಾಗಿ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮಂಗಳವಾರ ರಾಯಚೋಟಿ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ನೂರೊಂದು ಕುಂಭಮೇಳ ಹಾಗೂ ವಿವಿಧ ಜನಪದ ವಾದ್ಯ-ಮೇಳಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net