ಧರ್ಮವನ್ನು ಆಚರಣೆ ಮೂಲಕ ತೋರಿಸಿ

24ss1udghatane
Published on

ಶನಿವಾರಸಂತೆ: ಧರ್ಮವನ್ನು ಆಚರಣೆ ಮೂಲಕ ತೋರಿಸಿ ಎಂದು ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಶ್ರೀ ಭುವನಕೀರ್ತಿ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಶನಿವಾರಸಂತೆ ಸಮಿಪದ ಕೊಡಗಿನ ಜೈನಕಾಶಿ ಮುಳ್ಳೂರು ತ್ರಿವಳಿ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಅಸ್ತಿತ್ವ, ಪ್ರಭಾವ ಪರಿಚಯವಾಗಬೇಕು. ಶಾಂತಿ ಮತ್ತು ಅಹಿಂಸೆಯಿಂದ ಧರ್ಮದ ಆಚರಣೆ ಮಾಡುವ ಮೂಲಕ ಇತಿಹಾಸ ತಿಳಿಯಬೇಕು. ನಮ್ಮ ಸಮಾಜಕ್ಕೆ ಗೌರವ ಬರಲಿದ್ದು, ಧರ್ಮವನ್ನು ಆಚರಣೆಯ ಮೂಲಕ ತೋರಿಸಿದರೆ ಧರ್ಮ ಪ್ರಭಾವ ಬೀರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆರತಿಪುರ ದಿಗಂಬರ ಜೈನ ಮಠದ ಶ್ರೀ ಸಿದ್ದಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಜೈನ ಧರ್ಮದ ಏಳಿಗೆಗೆ ಹಲವಾರು ಶತಮಾನಗಳಿಂದ ಜನರು ಶ್ರಮಿಸಿದ್ದು, ವಿದೇಶದಲ್ಲೂ ಧರ್ಮ ಕಾರ್ಯಗಳನ್ನು ಮಾಡಿದ್ದಾರೆ. ಧರ್ಮ ಕಲ್ಯಾಣ ಮತ್ತು ಆತ್ಮ ಕಲ್ಯಾಣ ಹಾಗೂ ಕ್ಷೇತ್ರದ ರಕ್ಷಣೆಗೆ ಸಹಕರಿಸಿದ್ದಾರೆ. ಈ ಮೂಲಕ ಜಿನ ಮಂದಿರದ ರಕ್ಷಣೆ ಮತ್ತು ಧರ್ಮ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕ್ಷುಲ್ಲಕ ಆನಂದಕೀರ್ತಿ ಭಟ್ಟಾರಕ ಸ್ವಾಮೀಜಿ, ಗ್ರಾಮದ ನಿವಾಸಿ ಮತ್ತು ನಿವೃತ್ತ ನ್ಯಾಯಮೂರ್ತಿ ಎಂ.ಆರ್.ದೇವಪ್ಪ ಮಾತನಾಡಿದರು.

ಪ್ರಮುಖರಾದ ಡಾ.ಅಶ್ವಿನ್ ಕುಮಾರ್, ಮೈಸೂರು ಪ್ರಕಾಶ್, ಶಾಂತಿಪ್ರಸಾದ್, ಹಾಸನ ಜೈನ ಸಂಘದ ಅಧ್ಯಕ್ಷ ಶಾಂತೇಶ್, ಲೇಖಕ ವೀರೇಂದ್ರ ಬೇಗೂರು, ಶನಿವಾರಸಂತೆ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ.ಸುಜಲಾದೇವಿ, ಮುಳ್ಳೂರು ಜೈನ ಪೂಜಾ ಸಮಿತಿಯ ಸದಸ್ಯರು, ವಿವಿಧ ಜಿಲ್ದಲೆಗಳ ಜೈನ ಸಮಾಜದ ಪ್ರಮುಖರು ಮುಳ್ಳೂರು ಗ್ರಾಮಸ್ಥರು ಹಾಜರಿದ್ದರು. ಪುರೋಹಿತರಾದ ನಂದಕುಮಾರ್, ಎಚ್.ಜಿನರಾಜ್, ಚಂದ್ರಪ್ರಸಾದ್, ಸಮ್ಮತಿಕುಮಾರ್, ಜಿನೇಂದ್ರ, ಪಾರ್ಶ್ವ ಶಾಸ್ತ್ರಿ ಧಾರ್ಮಿಕ ವಿದಿ ವಿಧಾನಗಳನ್ನು ನೆರವೇರಿಸಿದರು, ಭಕ್ತಾದಿಗಳು, ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net