

ಕೊಡೇಕಲ್: ಜಗತ್ತಿನಲ್ಲಿ ಧರ್ಮ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವುದಲ್ಲದೆ ಮತ್ತು ಧರ್ಮ ಪಾಲನೆಗೆ ಶ್ರೀಕೃಷ್ಣ ಮತ್ತೊಂದು ಹೆಸರಾಗಿದ್ದಾನೆ ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸೋಮವಾರ ಯಾದವ ಸಮುದಾಯದಿಂದ ಹಮ್ಮಿಕೊಂಡ ಕೃಷ್ಣ ಜನ್ಮಾಷ್ಟಮಿ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣನ ವ್ಯಕ್ತಿತ್ವ ರೋಚಕ, ಬಹುಮುಖ ವ್ಯಕ್ತಿತ್ವವುಳ್ಳ, ಕೃಷ್ಣ ಪರಮಾತ್ಮ ದ್ವಾಪರ ಯುಗದಲ್ಲಿ ದೇವಕಿಯ ಕಂದನಾಗಿ ಜನಿಸಿ ಅನೇಕ ಲೀಲೆ ತೋರಿಸಿದ್ದಾನೆ ಎಂದರು.
ಕೃಷ್ಣನ ಶ್ರೀಮುಖದಿಂದ ಹೋರಟ ದಿವ್ಯವಾಣಿ ಭಗವದ್ಗೀತೆಯ ಸಾಹಿತ್ಯದಲ್ಲಿ ತನ್ನದೆ ಸ್ಥಾನ ಹೊಂದುವ ಮೂಲಕ ಇಡೀ ವಿಶ್ವಕ್ಕೆ ನಮ್ಮ ಭರತ ದೇಶ ಮಾದರಿಯಾಗುವಂತೆ ಮಾಡಿದೆ, ಕೃಷ್ಣನನ್ನು ಸಂಸ್ಕೃತಿಕ ಪ್ರತೀಕವಾಗಿ ನೋಡಬೇಕು. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಪಿಕೆಪಿಎಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಶಾಮಸುಂದರ ಜೋಶಿ ಮಾತನಾಡಿದರು. ಬಸವಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಪಂಡಿತ ವೇ.ಮೂ.ಜಗನ್ನಾಥ ಆಚರ‍್ಯ ಜೋಶಿ, ರಾಜಾ ಜಿತೇಂದ್ರನಾಯಕ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಎಸ್.ಎಸ್.ಜೋಶಿ, ರಂಗಪ್ಪ ಜಂಗಳಿ, ರವಿಂದ್ರ ಅಂಗಡಿ, ಮೋಹನ ಪಾಟೀಲ್, ಹಣಮಂತ್ರಾಯ ಜಿರಾಳ, ಸೋಮಲಿಂಗಪ್ಪ ದೋರಿ, ಬಾಳಪ್ಪ ಜಂಗಳಿ, ಕನಕಪ್ಪ ಜಂಗಳಿ, ಮಂಜುನಾಥ ಜಂಗಳಿ, ಬಸವರಾಜ ಜಂಗಳಿ, ಚಂದ್ರಶೇಖರ ಹೋಕ್ರಾಣಿ, ಸುರೇಶ ಬಪ್ಪರಗಿ, ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ, ರೈತ ಸಂಘದ ತಾಲೂಕಾಧ್ಯಕ್ಷ ಅವಿನಾಶ ದೊರಿ, ಬಸವರಾಜ ಅಂಗಡಿ, ಮಲ್ಲು ವಾಲಿಕಾರ, ತಿಮ್ಮಪ್ಪ ಜಂಗಳಿ ಇತರರಿದ್ದರು.
ಪವನ ದೇಶಪಾಂಡೆ ಪ್ರಸ್ತಾವಿಕ ಮಾತನಾಡಿದರು. ಸಂಗಮೇಶ ರಾಮನಗೌಡ್ರ ನಿರೂಪಣೆ ಮಾಡಿದರು. ಸರಸ್ವತಿ ಜಂಗಳಿ ಮತ್ತು ಸಂಗಡಿಗರು ಪ್ರಾರ್ಥನೆ ನಡೆಸಿಕೊಟ್ಟರು. ಮಲ್ಲು ಜಂಗಳಿ ವಂದಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು.