ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿ

Basavaraj Dhannur
Published on

ಬೀದರ್: ಬರುವ ಡಿಜಿಟಲ್ ಮಾದರಿ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸಬೇಕು ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.

ಜನಗಣತಿಯು ಪ್ರತಿ ಪ್ರಜೆಗೆ ತನ್ನ ಧರ್ಮ ನಮೂದಿಸಲು ಅವಕಾಶ ಕಲ್ಪಿಸಿದೆ.ಹೀಗಾಗಿ ತಮ್ಮ ಧರ್ಮ ಉಲ್ಲೇಖಿಸುವಲ್ಲಿ ಲಿಂಗಾಯತರು ಹಿಂದೆ ಬೀಳಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಂಗಾಯತ ಎಂದೇ ಬರೆಸಿದ್ದಲ್ಲಿ ಮಾತ್ರ ಸಮಾಜದ ನಿಖರ ಜನಸಂಖ್ಯೆ ಸರ್ಕಾರಕ್ಕೆ ಗೊತ್ತಾಗಲಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ಸಂಚಲನ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಸಲದ ಜನಗಣತಿ ಮಹತ್ವವಿದೆ. ಈ ಅವಕಾಶ ಕೈಚೆಲ್ಲಿದರೆ ಮತ್ತೆ 10 ವರ್ಷ ಕಾಯಯಬೇಕಾಗುತ್ತದೆ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ವೀರಶೈವವೂ ಸೇರಿ 102 ಉಪಪಂಗಡ ಇವೆ. ಹೀಗಾಗಿ ಜನಗಣತಿ ಧರ್ಮದ ಕಾಲಂನಲ್ಲಿ ಲಿಂಗಾಯತ ಹಾಗೂ ಉಪ ಪಂಗಡದ ಕಾಲಂನಲ್ಲಿ ಆಯಾ ಉಪ ಪಂಗಡವನ್ನು ನಮೂದಿಸಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net