ಧರ್ಮ ಸೂಜಿ ಜಾತಿ ಕತ್ತರಿ

kml
ಮಹಾಗಾಂವ್‌ದಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಮಾರಂಭವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ಶ್ರೀ ಅಲ್ಲಮಪ್ರಭು ಶಿವಯೋಗಿ, ಶ್ರೀ ಅಭಿನವ ಬಸವಲಿಂಗ ಶಿವಾಚಾರ್ಯ, ಮಾತೆ ನಂದೀಶ್ವರಿ, ಶ್ರೀ ಕುಮಾರ ಮುತ್ಯಾ, ಶ್ರೀ ವಿರೂಪಾP್ಷÀ ದೇವರು, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಪ್ರಮುಖರಾದ ಅಣ್ಣಾರಾವ ಬಿರಾದಾರ, ಶಿವಪ್ರಭು ಪಾಟೀಲ್, ಆಶಾ ರಾಠೋಡ್ ಇದ್ದರು.
Published on

ಕಮಲಾಪುರ: ಧರ್ಮ ಸೂಜಿ ಇದ್ದಂತೆ. ಅಲ್ಲಲ್ಲಿ ಚದುರಿ ಹೋಗಿದ್ದವರನ್ನು ಒಗ್ಗೂಡಿಸುತ್ತದೆ. ಆದರೆ ಜಾತಿ ಕತ್ತರಿ ಇದ್ದಂತೆ. ಎಲ್ಲರನ್ನು ಬೇರ್ಪಡಿಸುತ್ತದೆ. ಕೆಲವರು ಜಾತಿ ಹೆಸರಿನಲ್ಲಿ ಜನರನ್ನು ಒಡೆಯುತ್ತಿರುವುದು ಉತ್ತಮವಲ್ಲ, ಸಕಲ ಮಾನವ ಕುಲ ಒಗ್ಗೂಡಿಸುವ ಧರ್ಮವನ್ನು ಅನುಸರಿಸಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಮಹಾಗಾಂವ್‌ನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪಾದಪೂಜೆ ಮತ್ತು ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಭಾರತ ಧರ್ಮ ಪ್ರಧಾನ ದೇಶ. ಸಾಕಷ್ಟು ಧರ್ಮ ಮತ್ತು ವಿಭಿನ್ನ ಆಚರಣೆಗಳಿದ್ದರೂ ಎಲ್ಲದರ ಉz್ದೆÃಶ ಮಾತ್ರ ಮಾನವ ಧರ್ಮದ ಏಳಿಗೆ. ಜಾತಿ-ಧರ್ಮಕ್ಕೆ ಜಯವಾಗಲಿ ಎಂದು ಹೇಳುವವರ ಮಧ್ಯೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ ಏಕೈಕ ಪೀಠ ರಂಭಾಪುರಿ ಪೀಠ. ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಲು ಪೀಠ ಬದ್ಧ ಎಂದರು.

ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಸವಣ್ಣನನ್ನು ಕರೆದದ್ದು ಇದೇ ವೀರಶೈವ ಧರ್ಮ. ಕಲಬುರಗಿ ಶರಣಬಸವೇಶ್ವರರು ಗುರುಲಿಂಗ ಜಂಗಮ ಪ್ರೇಮಿಗಳಾಗಿದ್ದರು. ಕಲ್ಕೇರಿಯ ಶ್ರೀ ಮರುಳಸಿದ್ದ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಬೆಳೆದರು. ಹೀಗಾಗಿ ಶರಣಬಸವೇಶ್ವರರ ಪಕ್ಕದಲ್ಲೇ ಶ್ರೀ ಮರುಳಸಿದ್ಧರ ಮೂರ್ತಿ ಸ್ಥಾಪಿಸಲಾಗಿದೆ. ಕಡಕೋಳ ಮಡಿವಾಳಪ್ಪ ಕಲಬುರಗಿ ಶರಣಬಸವೇಶ್ವರರಿಗೆ ಲಿಂಗ ದೀಕ್ಷೆ ಕೇಳಿದರು, ಚಿನ್ಮಯಗಿರಿಯ ಶ್ರೀ ಮಹಾಂತಲಿAಗ ಶಿವಾಚಾರ್ಯ ನೀಡುತ್ತಾರೆ ಎಂದು ಅವರಲ್ಲಿಗೆ ಕಳುಹಿಸಿದರು ಎಂದು ಹೇಳಿದರು.

ನಾಗೂರಿನ ಶ್ರೀ ಅಲ್ಲಮಪ್ರಭು ಶಿವಯೋಗಿ, ಮುಗಳಿ ಶ್ರೀ ಅಭಿನವ ಬಸವಲಿಂಗ ಶಿವಾಚಾರ್ಯ, ಲಿಂಗಸೂಗೂರಿನ ಮಾತೆ ನಂದೀಶ್ವರಿ, ಮಹಾಗಾಂವ್‌ನ ಶ್ರೀ ಕುಮಾರ ಮುತ್ಯಾ, ಕಳ್ಳಿಮಠದ ಶ್ರೀ ವಿರೂಪಾP್ಷÀ ದೇವರು, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಜಿಪಂ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಪಿಎಸ್‌ಐ ಆಶಾ ರಾಠೋಡ್, ಪ್ರಮುಖರಾದ ಅಣ್ಣಾರಾವ ಬಿರಾದಾರ, ಗಿರೀಶ ಪಾಟೀಲ್, ಮುರುಗೇಂದ್ರ ವೀರಶೆಟ್ಟಿ, ಗುರುಪಾದಪ್ಪ ಕಿಣಗಿ, ಮಲ್ಲಿಕಾರ್ಜುನ ಮರತೂರಕರ, ನರೇಶ ಹರಸೂರಕರ, ನಂದನಕುಮಾರ ಹರಸೂರಕರ, ವೀರಣ್ಣ ಉಚ್ಚದ ಇತರರಿದ್ದರು. ಅಮೃತಪ್ಪ ಮಲ್ಕಪ್ಪಗೋಳ ಸ್ವಾಗತಿಸಿದರು. ಭೂಮಿಕಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಅಂಬಾರಾಯ ಮಡ್ಡೆ ನಿರೂಪಣೆ ಮಾಡಿದರು.

ಮಹಾಗಾಂವ್‌ನ ಶ್ರೀ ಯಲ್ಲಮ್ಮ ದೇವಸ್ಥಾನದಿಂದ ವೀರಭದ್ರೇಶ್ವರ ದೇಗುಲವರೆಗೂ ಅಲಂಕೃತ ಸಾರೋಟದಲ್ಲಿ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಿತು. ಮಹಿಳೆಯರು ಕುಂಭ- ಕಳಸ ಹೊತ್ತು ಹೆಜ್ಜೆ ಹಾಕಿದರು. ಅಸಂಖ್ಯ ಭಕ್ತರಿಂದ ಜೈಘೋಷ ಮೊಳಗಿದವು.

ವಿರೂಪಾP್ಷÀ ದೇವರಿಗೆ ಅಧ್ಯಾತ್ಮ ಶಿP್ಷÀಣ: ಕಳ್ಳಿಮಠದ ಶ್ರೇಷ್ಠ ಯೋಗಿ ಹಾಗೂ ಖ್ಯಾತ ಪೀಠಾಧಿಪತಿಗಳಾಗಿದ್ದ ಶ್ರೀ ಗುರುಲಿಂಗ ಶಿವಾಚಾರ್ಯ ಕೆಲವರ್ಷ ಹಿಂದೆ ಲಿಂಗೈಕ್ಯರಾಗಿದ್ದು, ಶ್ರೀಮಠಕ್ಕೆ ಶ್ರೀ ವಿರೂಪಾಕ್ಷ ದೇವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಬಾಲ ಶ್ರೀಗಳ ಪ್ರಾಥಮಿಕ ಶಿಕ್ಷಣ ಪೂರ್ಣಗೊಂಡ ಬಳಿಕ ಗ್ರಾಮಸ್ಥರು ಒಪ್ಪಿದರೆ ಬಾಳೆಹೊನ್ನೂರು ಅಥವಾ ಬೆಂಗಳೂರಿನ ರಂಭಾಪುರಿ ಪೀಠದಲ್ಲಿ ಉಚಿತವಾಗಿ ಅಧ್ಯಾತ್ಮ ಶಿಕ್ಷಣ ನೀಡುವುದಾಗಿ ರಂಭಾಪುರಿ ಜಗದ್ಗುರುಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net