ಧರ್ಮ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

20blrp1
Published on

ಬೇಲೂರು: ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ರಂಭಾಪುರಿ ಜಗದ್ಗುರುಗಳ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮಾನವ ಹಾಗೂ ಸಭಾ ಮಂಟಪ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ ಎಂದು ಸಮ್ಮೇಳನದ ಸೇವಾ ಸಮಿತಿ ಕೋಶಾಧ್ಯಕ್ಷ ನಟರಾಜ್ ಐಸ್ವಾಮಿಗೌಡ ತಿಳಿಸಿದರು.


ಮಾನವ ಮಂಟಪ ಮತ್ತು ಸಭಾ ಮಂಟಪ ನಿರ್ಮಾಣದ ಕೆಲಸ ವೀಕ್ಷಿಸಿ ಮಾತನಾಡಿದ ಅವರು, ಸೆ.26ರಿಂದ ಅ.5ರವರೆಗೆ 10 ದಿನಗಳ ಕಾಲ ನಡೆಯಲಿರುವ ರಂಭಾಪುರಿ ಜಗದ್ಗುರುಗಳ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ವಿರೋಧ ಪಕ್ಷದ ಮುಖಂಡರು ಹಾಗೂ ನಾಡಿನಾದ್ಯಂತ ಲಕ್ಷಾಂತರ ಭಕ್ತರು, ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ ಎಂದರು.


ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಕವಿಗೋಷ್ಟಿ ಸೇರಿದಂತೆ ಇತರ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕಾಗಿ ಬೇಲೂರು ಪಟ್ಟಣದಲ್ಲಿ ಬೃಹತ್ ಮಾನವ ಮಂಟಪದ ವೇದಿಕೆ, ಭಕ್ತರು ಕುಳಿತುಕೊಳ್ಳಲು ಸಭಾ ಮಂಟಪದ ಕೆಲಸ ಭರದಿಂದ ಸಾಗುತ್ತಿದೆ. ಜತೆಗೆ ದಾಸೋಹ ತಯಾರಿಸಲು ಸಹ ಬೃಹತ್ ಮಂಟಪ ನಿರ್ಮಿಸಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net