

ಚಿತ್ತಾಪುರ: ಹಿಂದು ಧರ್ಮದ ಸಂಸ್ಕೃತಿ, ಸಂಸ್ಕಾರ, ದೇಶದ ಸುರಕ್ಷೆಗಾಗಿ ಪ್ರತಿಯೊಬ್ಬರೂ ಹೋರಾಡುವ ಅಗತ್ಯವಿದೆ ಎಂದು ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್ ಮಂಗಳವಾರ ಆಯೋಜಿಸಿದ್ದ ಪರಿಷತ್‌ನ ಷಷ್ಠಿಪೂರ್ತಿ ಮಹೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಸಂಸ್ಕೃತಿ, ಸಂಸ್ಕಾರ, ಪದ್ಧತಿ, ಆಚರಣೆ ಬಗ್ಗೆ ವಿಎಚ್‌ಪಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಧರ್ಮದ ಪರ ಬಂದವರನ್ನು ಶ್ರೀಕೃಷ್ಣ ಧರ್ಮದಿಂದಲೇ ಯುದ್ಧ ಮಾಡಿದ್ದಾನೆ. ಅಧರ್ಮಿಯರೊಂದಿಗೆ ಅಧರ್ಮದಿಂದಲೇ ಯುದ್ಧ ಮಾಡಿ ತಕ್ಕ ಉತ್ತರ ನೀಡಿದ್ದಾನೆ. ಆದ್ದರಿಂದ ಹಿಂದು ಧರ್ಮ ಪಾಲಿಸುವ ಪ್ರತಿಯೊಬ್ಬರೂ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಹಿಂದುಗಳಿಗೆ ಮತಾಂತರ, ಲವ್ ಜಿಹಾದ್ ಪಿಡುಗು ಇನ್ನೂ ಬಿಟ್ಟಿಲ್ಲ. ಇದನ್ನು ತಡೆಯಲು ವಿಎಚ್‌ಪಿ ಜತೆ ಎಲ್ಲರೂ ಕೈಜೋಡಿಸಬೇಕಿದೆ. ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು. ಹಿಂದು ಸಮಾಜದ ಏಳಿಗೆಗಾಗಿ ಪ್ರತಿದಿನ ಒಂದು ತಾಸು ಮೀಸಲಿಡಬೇಕೆಂದು ಕೋರಿದರು.
ಕಾರ್ಯಕ್ರಮ ಉದ್ಘಾಟಿಸಿದ ಓರಿಯಂಟ್ ಸಿಮೆಂಟ್ ಕಂಪನಿ ಉಪಾಧ್ಯಕ್ಷ ಸಾಜೀಕುಮಾರ ಮಾತನಾಡಿ, ಕೇವಲ ಹಣವಿದ್ದರೆ ಸಾಲದು. ಹಿಂದುಗಳು ಆರೋಗ್ಯವಂತರಾಗಿರಬೇಕು. ಹಣ, ಅಂತಸ್ತು ಜತೆಗೆ ಉತ್ತಮ ಆರೋಗ್ಯವಿದ್ದಾಗಲೇ ಒಳ್ಳೆಯ ಜೀವನ ನಡೆಸಬಹುದು. ದೇಶದ ಸಮೃದ್ಧಿ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಹೋರಾಡುತ್ತಿರುವ ವಿಶ್ವ ಹಿಂದು ಪರಿಷತ್ ಕಾರ್ಯವನ್ನು ಶ್ಲಾಘಿಸಿದರು.
ಸುಲೇಪೇಟದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಕೆಟ್ಟ ಆಲೋಚನೆಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಕAಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ, ಇವಣಿಯ ಶ್ರೀ ಅವಧೂತ ನಾಗಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ರಮಾಬಾಯಿ ಅಂಬೇಡ್ಕರ್ ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ ಘವಾರಿಯಾ ಮಾತನಾಡಿದರು. ವಿಎಚ್‌ಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಕಾರ್ಯದರ್ಶಿ ಮಹಾದೇವ ಅಂಗಡಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಬಲವಂತರೆಡ್ಡಿ, ಪ್ರಮುಖರಾದ ರೇಣುಕಾ ಬಿರಾದಾರ, ಪ್ರದೀಪ ಪಾಟೀಲ್ ಹೊಸಳ್ಳಿ, ಬಸವರಾಜ ಬೆಣ್ಣೂರಕರ, ನಾಗರಾಜ ಭಂಕಲಗಿ, ರವೀಂದ್ರರೆಡ್ಡಿ ಅನಪುರ, ನಿರ್ಮಲಾ ಭಂಗಿ, ವಿಶ್ವರಾಜ ಜಗನ್ನಾಥ, ವಿಶ್ವರಾಧ್ಯ ಪಾಟೀಲ್ ಕರದಾಳ, ಬಸವರಾಜ ಹೂಗಾರ, ಶಂಕರ ರಾವೂರಕರ್, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಪೂಜಾರಿ, ಶ್ಯಾಮ ಮೇಧಾ, ಕೋಟೇಶ್ವರ ರೇಶ್ಮಿ, ಗೋಪಾಲ ರಾಠೋಡ್,ಪ್ರಲ್ಹಾದ ವಿಶ್ವಕರ್ಮ, ಸಂತೋಷ ಹಾವೇರಿ, ಲಕ್ಷಿö್ಮÃ ಮಟ್ಟಿ, ಶಿವಲೀಲಾ ಮಠಪತಿ, ಸುವರ್ಣಾ ಶಿಲ್ಪಿ ಇತರರಿದ್ದರು.
ವಿಎಚ್‌ಪಿ ಪ್ರಾಂತ ಸೇವಾ ಸಹ ಪ್ರಮುಖ ಅಂಬರೇಶ ಸುಲೇಗಾಂವ ಸ್ವಾಗತಿಸಿದರು. ಶ್ರುತಿ ಹೆಬ್ಬಾಳ ಓಂಕಾರ ಪಠಣೆ ಮಾಡಿದರು. ಸಾಬಣ್ಣ ಪೂಜಾರಿ ಐಕ್ಯತೆ ಮಂತ್ರ ಹೇಳಿದರು. ಸಂತೋಷ ಅಲ್ಲೂರ ನಿರೂಪಣೆ ಮಾಡಿದರು. ಶ್ರುತಿ ತಾವರೆ ವೈಯಕ್ತಿಕ ಗೀತೆ ಹಾಡಿದರು. ಚಂದ್ರಕಾAತ ದೊಡ್ಮನಿ ವಂದಿಸಿದರು.