ಧರ್ಮ ಪಾಲನೆಯಿಂದ ಮನಸ್ಸು ಶುದ್ಧಿ

1505Klb07
???????
Published on

ಕಲಬುರಗಿ: ಕಷ್ಟಗಳೇಷ್ಟೇ ಬಂದರೂ ಅಚಲ ಗಟ್ಟಿತನ ನಮ್ಮದಾಗಬೇಕು. ಸತ್ಯ ಧರ್ಮ ಪರಿಪಾಲನೆಯಿಂದ ಮನಸ್ಸು ಪರಿಶುದ್ಧಗೊಳ್ಳುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಶ್ರೀ ನಿವಾಸ ಸರಡಗಿ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದಲ್ಲಿ ಬುಧವಾರ ಏರ್ಪಡಿಸಿದ್ದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭ, ಮಂಗಲ ಸ್ನಾನ ಹಾಗೂ ನೂತನ ಉತ್ತರಾಧಿಕಾರಿ ನಿಯುಕ್ತಿ, ಭಕ್ತ ಹಿತ ಚಿಂತನ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆಧುನಿಕ ವಿಜ್ಞಾನ ನಿರುತ್ತರವಾಗುವುದೋ ಅಲ್ಲಿಂದ ಭಾರತೀಯ ಆಧ್ಯಾತ್ಮ ಚಿಂತನೆ ಪ್ರಾರಂಭವಾಗುತ್ತದೆ ಎಂದು ಡಾ.ಎಸ್.ರಾಧಾಕೃಷ್ಣನ್ ಮಾತಿನಂತೆ ಧರ್ಮ ಮತ್ತು ಸಂಸ್ಕೃತಿಗೆ ಅತ್ಯಂತ ಮಹತ್ವವಿದೆ. ಬದುಕಿನ ಯಶಸ್ವಿಗೆ ಲೌಕಿಕ ಜ್ಞಾನ ಹೇಗೆ ಅವಶ್ಯವೋ ಹಾಗೆ ನೊಂದ ಬೆಂದ ಮನಕ್ಕೆ ಅಧ್ಯಾತ್ಮ ಜ್ಞಾನದ ಅವಶ್ಯವಿದೆ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ವ್ಯಕ್ತಿಯ ಜೀವನ ನಿರರ್ಥಕ. ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶದAತೆ ಮನುಷ್ಯ ಜಾಗೃತನಾಗಿ ಧರ್ಮ ಪಾಲಿಸಬೇಕು ಎಂದು ಹೇಳಿದರು.

ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಇವೆರಡರ ಮಧ್ಯೆ ಬದುಕು ಸಮೃದ್ಧಗೊಳಿಸಲು ಮಹಾತ್ಮರು ತೋರಿದ ದಾರಿ ಆಶಾಕಿರಣವಾಗಿದೆ. ಶ್ರೀ ರೇವಣಸಿದ್ಧ ಶಿವಾಚಾರ್ಯರು ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಮಠದ ಗೌರವ ಘನತೆ ಹೆಚ್ಚಿಸಿದ್ದಾರೆ. ಸಶಕ್ತವಾಗಿರುವಾಗಲೇ ಪುತ್ರವರ್ಗ ಪರಂಪರೆಯAತೆ ಅದ್ವಿಕ್ ಎಂಬ ವಟುವನ್ನು ಸ್ವೀಕರಿಸಿ ಉತ್ತರಾಧಿಕಾರಿ ಎಂದು ಘೋಷಿಸಿರುವುದು ತ್ಯಾಗ ಔದಾರ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸ ನಿರ್ಮಿಸಬಹುದು. ಕೆಲವರು ನಮ್ಮವರಂತೆ ಕಂಡರೂ ಅವರ ಒಳಗಿನ ರೂಪ ಭಾವನೆ ಬೇರೆಯೇ ಇರುತ್ತದೆ ಎಂಬುದು ಮರೆಯಬಾರದು. ವೀರಶೈವ ಧರ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿಕೊಟ್ಟಿದ್ದನ್ನು ಅನುಸರಿಸಿ ಬಾಳಬೇಕುಎಂದರು.
ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ಡಾ.ರಾಜಶೇಖರ ಶಿವಾಚಾರ್ಯರು, ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಶ್ರೀ ಚಂದ್ರಶೇಖರ ಶಿವಾಚಾರ್ಯರು, ಶ್ರೀ ರಾಜಶೇಖರ ಶಿವಾಚಾರ್ಯರು, ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಬಸವರಾಜ ಭೀಮಳ್ಳಿ, ಅಣ್ಣಾರಾವ ಬಿರಾದಾರ, ಅಮೃತಪ್ಪ ಗೌಡ, ಬೀರೂರು ಶಿವಸ್ವಾಮಿ, ಆರ್.ಆರ್.ಹಿರೇಮಠ, ಮಡಿವಾಳ ಶಾಸ್ತಿç, ಸತೀಶ ಹಿರೇಮಠ ಇತರರಿದ್ದರು. ನಾಗಲಿಂಗಯ್ಯ ಹಿರೇಮಠ ಮತ್ತು ಹಣಮಂತ್ರಾಯ ಅಟ್ಟೂರು ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net