ಧರ್ಮ ಪರಿಪಾಲಕ ಶ್ರೀಕೃಷ್ಣ

07-09kodekal02
ಕೊಡೇಕಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬುಧವಾರ ಯಾದವ ಸಮುದಾಯದಿಂದ ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ರಾಣಿ ರಂಗಮ್ಮ ಜಹಾಗೀರದಾರ, ಶಾಮಸುಂದರ ಜೋಶಿ, ಗಂಗಾಧರ ಜೋಶಿ, ರಂಗಪ್ಪ ಜಂಗಳಿ, ಮೋಹನ ಪಾಟೀಲ್ ಇತರರಿದ್ದರು.
Published on

ಕೊಡೇಕಲ್: ವಿವಿಧ ಅವತಾರಗಳಲ್ಲಿ ಜನ್ಮತಾಳಿದ ಶ್ರೀಕೃಷ್ಣ ಪರಮಾತ್ಮ ಧರ್ಮ ಪರಿಪಾಲಕನಾಗಿದ್ದಾನೆ ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ನುಡಿದರು.

ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಬುಧವಾರ ಯಾದವ ಸಮುದಾಯ ಏರ್ಪಡಿಸಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀ ಕೃಷ್ಣನ ವ್ಯಕ್ತಿತ್ವ ರೋಚಕ. ದ್ವಾಪರ ಯುಗದಲ್ಲಿ ದೇವಕಿಯ ಕಂದನಾಗಿ ಜನಿಸಿ ಅನೇಕ ಲೀಲೆಗಳನ್ನು ತೋರಿಸಿದ್ದಾನೆ. ಕೃಷ್ಣನ ಶ್ರೀಮುಖದಿಂದ ಹೊರಟ ದಿವ್ಯವಾಣಿ ಭಗವದ್ಗೀತೆ ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ ಎಂದರು.

ಶಾಮಸುಂದರ ಜೋಶಿ ಮಾತನಾಡಿದರು. ಅರ್ಚಕ ಗಂಗಾಧರ ಜೋಶಿ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು.

ರಾಣಿ ರಂಗಮ್ಮ ಜಹಾಗೀರದಾರ, ಎಸ್.ಎಸ್. ಜೋಶಿ, ಜಿ.ಬಿ. ಜೋಶಿ, ಬಸವಂತಭಟ್ ಜೋಶಿ, ರಂಗಪ್ಪ ಜಂಗಳಿ, ರವೀಂದ್ರ ಅಂಗಡಿ, ಬಸವಂತರಾವ ಕುಲಕರ್ಣಿ, ಮೋಹನ ಪಾಟೀಲ್, ಹಣಮಂತ್ರಾಯ ಜಿರಾಳ, ಬಾಳಪ್ಪ ಜಂಗಳಿ, ಕನಕಪ್ಪ ಜಂಗಳಿ, ಮಂಜುನಾಥ ಜಂಗಳಿ, ಬಸವರಾಜ ಜಂಗಳಿ, ಚಂದ್ರಶೇಖರ ಹೊಕ್ರಾಣಿ, ಮಲ್ಲು ವಾಲೀಕಾರ ಇತರರಿದ್ದರು. ಗುರುರಾಜ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಕೋರಿ ಸಂಗಯ್ಯ ಗಡ್ಡದ ಸ್ವಾಗತಿಸಿದರು. ಮಲ್ಲು ಜಂಗಳಿ ವಂದಿಸಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net