

ಅಳವಂಡಿ: ಮಾನಸಿಕ ನೆಮ್ಮದಿ, ಶಾಂತಿ, ಉತ್ಸಾಹ ಹಾಗೂ ಒಗ್ಗಟ್ಟಿನ ಭಾವನೆ ಮೂಡಬೇಕಾದರೆ ಜನರು ಸಾಮೂಹಿಕವಾಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಸಿದ್ದೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗಾಮದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರೆ ಅಂಗವಾಗಿ ತೇರಿನ ಗಡ್ಡಿಗೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು. ಸರ್ವರು ಸಮಾನರು ಎಂಬ ಗುಣವನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಅಭಿವೃದ್ಧಿ ಸಾಧ್ಯ. ಮನಸ್ಸನ್ನು ಪ್ರೀತಿಸುವ, ಗೌರವಿಸುವ ಗುಣ ಬೆಳೆಸಿಕೊಳ್ಳಿ. ಯಾವಾಗಲೂ ನಾಶವಾಗದೇ ಇರುವುದು ಧರ್ಮ, ಇದನ್ನು ನಾಶ ಪಡಿಸುವ ಶಕ್ತಿ ಯಾವ ಕಾಲಕ್ಕೂ ಇಲ್ಲ. ಸಾಧನೆಗೆ ಸ್ಪೂರ್ತಿ ತುಂಬುವ ಹಾಗೂ ಬದುಕಿನ ದಾರಿ ತೋರುವ ಗುರುವನ್ನು ಸ್ಮರಿಸಿ ಎಂದರು.
ಪ್ರಮುಖರಾದ ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ಅನ್ವರ ಗಡಾದ, ರಮೇಶ ಬಾವಿಹಳ್ಳಿ, ಗಿರೀಶ ಕಣವಿ, ಮಂಜುನಾಥ ಹಿರೇಮಠ, ಶಿವಗ್ಯಾನಪ್ಪ, ವೀರಭದ್ರಯ್ಯ, ರೇಣುಕಪ್ಪ, ಛಾಯಪ್ಪ, ಅಶೋಕ ಬಂಡಿ, ದ್ಯಾಮಣ್ಣ, ಶ್ರೀಶೈಲಪ್ಪ, ಮಾರುತಿ, ಶಿವು, ಪ್ರಕಾಶ ಇತರರಿದ್ದರು.