ಧರ್ಮ ಧ್ವಜಾರೋಹಣ-ಧಾನ್ಯ ಪೂಜೆ

Dharma Flag Hoisting-Grain Puja
ವಿಜಯಪುರದ ನಂಜನಗೂಡು ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಪಂಚರಾತ್ರೋತ್ಸವದ ಅಂಗವಾಗಿ ಧರ್ಮ ಧ್ವಜಾರೋಹಣ ಜರುಗಿತು. ಗೋಪಾಲ ನಾಯಕ, ರವಿ ಆಚಾರ್ಯ, ಅರ್ಚಕ ಶ್ರೀಧರಾಚಾರ್ಯ ಮತ್ತಿತರರಿದ್ದಾರೆ.
Published on

ವಿಜಯಪುರ: ಕಲಿಯುಗದ ಕಾಮಧೇನು-ಕಲ್ಪವೃಕ್ಷ ಎಂದೇ ಖ್ಯಾತನಾಮರಾದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 351ನೇ ಆರಾಧನಾ ಮಹೋತ್ಸವ-ಪಂಚರಾತ್ರೋತ್ಸವ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥರ ಆಜ್ಞಾನುಸಾರವಾಗಿ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬುಧವಾರ ಅತ್ಯಂತ ಭಕ್ತಿಪುರಸ್ಸರವಾಗಿ ಆರಂಭಗೊಂಡಿತು.

ಪಂಚರಾತ್ರೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿತು. ಸಂಜೆ 6ಕ್ಕೆ ಧರ್ಮಧ್ವಜಾರೋಹಣ, ಗೋಪೂಜೆ, ಲಕ್ಷ್ಮಿ ಪೂಜೆ, ಪ್ರಾರ್ಥನೋತ್ಸವ, ಶಾಖೋತ್ಸವ, ಧಾನ್ಯ ಪೂಜೆ, ಶ್ರೇಯ ಪ್ರಾರ್ಥನೆ, ಮಹಾ ಮಂಗಳಾರತಿ ನಡೆದವು. ಶ್ರೀಮಠದ ವಿಚಾರಣಾಕರ್ತ ಗೋಪಾಲ ನಾಯಕರ ನೇತೃತ್ವದಲ್ಲಿ ವ್ಯವಸ್ಥಾಪಕ ರವಿ ಆಚಾರ್ಯ, ಅರ್ಚಕ ಶ್ರೀಧರಾಚಾರ್ಯ, ದಾಮೋದರಾಚಾರ್ಯರು ನಡೆಸಿಕೊಟ್ಟರು.
ಆರಾಧನೋತ್ಸವದ ಪ್ರಯುಕ್ತ ದವಸ-ಧಾನ್ಯ, ನಗದು- ಫಲಪುಷ್ಪಗಳನ್ನು ದೇಣಿಗೆ ನೀಡಿದ ದಾನಿಗಳಿಗೆ ಶ್ರೀಮಠದ ಪರವಾಗಿ ಶೇಷವಸ್ತ್ರ ನೀಡಿ ಗೌರವಿಸಲಾಯಿತು.

ಮಧ್ವೇಶಾಚಾರ್ಯ ಜೋಶಿ(ಮುತ್ತಗಿ), ವಾಮನರಾವ ದೇಶಪಾಂಡೆ, ಆರ್.ಆರ್. ಕುಲಕರ್ಣಿ, ಅಶೋಕ ತಾವರಗೇರಿ, ಜಿ.ಎಸ್. ಕುಲಕರ್ಣಿ, ವಿ.ಬಿ. ಕುಲಕರ್ಣಿ, ಜಯತೀರ್ಥ ಕಿರಸೂರ, ಕಿರಣ ಕುಲಕರ್ಣಿ, ಗುರುರಾಜ ಸೊಂಡೂರ, ಬಂಡಾಚಾರ್ಯ ಜೋಶಿ, ಭೀಮಣ್ಣ ಕುಲಕರ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net