

ಚಿಕ್ಕೋಡಿ: ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅವರನ್ನು ಧರ್ಮದ ದಾರಿಗೆ ತರಲು ಜಾಗೃತಿ ಮೂಡಿಸಬೇಕಾಗಿದೆ ಎಂದು ಡಾ.ಸಿದ್ದಸೇನ ಮುನಿ ಮಹಾರಾಜರು ಹೇಳಿದರು.
ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ಜಿ.ಎಸ್.ಕಾಂತೆ ಪ್ರೌಢಶಾಲೆ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರ್ಷಾಯೋಗ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಾತುರ್ಮಾಸದ ಸವಾಲಿನ ಕಳಶಗಳಾದ ಭಗವಾನ ಶಾಂತಿನಾಥರ ಕಳಸವನ್ನು ಬೆಳಗಾವಿ ಬಸ್ತವಾಡದ ಸುವರ್ಣಾ ಬಡನ್ನವರ, ಮಹಾವೀರ ಭಗವಾನರ ಕಳಸವನ್ನು ಬಾವನ ಸೌಂದತ್ತಿ ಗ್ರಾಮದ ಪ್ರಕಾಶ ಮಹಾಜನ, ಬಾಹುಬಲಿ ಮಹಾರಾಜರ ಕಳಸವನ್ನು ಮಹಾವೀರ ಪರಮಾಜೆ ಪಡೆದುಕೊಂಡರು.
ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ ಉದ್ಘಾಟಿಸಿದರು. ಸಿಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ಜಿನ್ನಪ್ಪ ಅಸ್ಕಿ, ಪ್ರಕಾಶ ಮಹಾಜನ, ಧೂಳಗೌಡ ಪಾಟೀಲ, ಡಾ.ಎನ್.ಎ.ಮಗದುಮ, ಎಸ್.ಟಿ, ಮುನ್ನೂಳ್ಳಿ, ಸುರೇಶ ತಂಗಾ, ವಿಲಾಸಮತಿ ಪಾಟೀಲ, ಬಾಹುಸಾಹೇಬ ಪಾಟೀಲ ಇತರರಿದ್ದರು.