ಧರ್ಮ ಜಾಗೃತಿ ಮೂಡಿಸುವುದು ಅಗತ್ಯ

01
Published on

ಕೊಡೇಕಲ್ : ಸಮಾಜದಲ್ಲಿ ಪ್ರತಿಯೊಬ್ಬರೂ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹಾವೇರಿಯ ಅಗಡಿ ಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಆರ್‌ಟಿಜೆ ಸಂಸ್ಥೆ ಆವರಣದಲ್ಲಿ ಗುರುವಾರ ಕರೆದಿದ್ದ ಶ್ರಾವಣ ಸಂಜೆ ಕರ‍್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಎಲ್ಲರೂ ಆಸ್ತಿ-ಅಂತಸ್ತು ಗಳಿಸುವ ಧಾವಂತದಲ್ಲಿ ಧರ್ಮ ಮರೆಯುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಣ್ಮರೆಯಾಗುತ್ತಿದೆ. ಹೀಗಾಗಿ ಎಲ್ಲರೂ ಧರ್ಮ ಜಾಗೃತಿ ಕೆಲಸದಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ಯುವ ಮುಖಂಡ ಹನುಮಂತ ನಾಯಕ, ಪ್ರಮುಖರಾದ ವೀರಸಂಗಪ್ಪ ಹಾವೇರಿ, ರಂಗನಾಥ ದೊರಿ, ಕನಕು ಜಿರಾಳ, ದೇವು ಗೋಪಾಳಿ, ವಸಂತಗೌಡ ಮಾಲಿಗೌಡ, ಮೋಹನ ಪಾಟೀಲ್, ಸೋಮಲಿಂಗಪ್ಪ ದೊರಿ, ವೀರಸಂಗಪ್ಪ ಅಂಬ್ಲಿಹಾಳ, ರವೀಂದ್ರ ಅಂಗಡಿ, ಅಂಬ್ರಪ್ಪ ಸಜ್ಜನ್, ಬೊಮ್ಮಣ್ಣ ಪತ್ತಾರ, ಬಸಲಿಂಗ ಸ್ವಾಮಿ, ಮಲ್ಲಣ್ಣ ಹೂಗಾರ, ತಿಪ್ಪಣ್ಣ ದ್ಯಾಮನಾಳ, ಶ್ರೀಶೈಲ ಸಜ್ಜನ್, ಗುರು ಅಥಣಿ, ಸಾತಪ್ಪ ಪಡಶೆಟ್ಟಿ, ಆದಪ್ಪ ತೋಟಗೇರ ಇತರರಿದ್ದರು. ಶ್ರೀ ನಾಗಭೂಷಣ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಭೀಮನಗೌಡ ಬಿರಾದಾರ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net