ಧರ್ಮ ಕ್ಷೇತ್ರಗಳಿಗೆ ಅಹಲ್ಯಾಬಾಯಿ ಚೈತನ್ಯ

0902KLB02
Published on

ಕಲಬುರಗಿ: ಮೊಘಲರ ಮತ್ತು ಪರಕೀಯರ ಕೈಗೆ ತುತ್ತಾಗಿ ದ್ವಂಸಗೊAಡ ಸನಾತನದ ಪ್ರತೀಕವಾಗಿದ್ದ ೩೪ಕ್ಕೂ ಅಧಿಕ ಧಾರ್ಮಿಕ ಮತ್ತು ಪುಣ್ಯ ಕ್ಷೇತ್ರಗಳಿಗೆ ಪುನರ್ಜನ್ಮ ನೀಡಿದ ಮಾಳವಾ ಸಾಮ್ರಾಜ್ಯದ ರಾಜಮಾತೆ ಅಹಲ್ಯಾಬಾಯಿ ಹೊಳ್ಕರ್ ಅವುಗಳಿಗೆ ಚೈತನ್ಯ ತುಂಬಿದ್ದಾರೆ ಎಂದು ಎಂದು ಕೇಂದ್ರೀಯ ವಿವಿ ಜಾನಪದ ಹಾಗೂ ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ರೋಹಿಣಾP್ಷÀ ಶಿರ್ಲಾಲು ಹೇಳಿದರು.

ಕೇಶವ ಸೇವಾ ಸಮಿತಿ, ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜಮಾತಾ ಅಹಲ್ಯಾಬಾಯಿ ಹೊಳ್ಕರ್ ಅವರ ೩೦೦ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ರಾಜಮಾತೆ ಅಹಲ್ಯಾಬಾಯಿ ಕ್ಷಾತ್ರ ಮತ್ತು ಶೌರ್ಯಕ್ಕೆ ಹೆಸರು ಮಾಡಿದ್ದರು. ಮಾತೃ ವಾತ್ಸಲ್ಯವೂ ಅವರಲ್ಲಿ ನೆಲೆಯೂರಿತ್ತು. ಆಕ್ರಮಣಕಾರರ ಕೈಯಿಂದ ಧ್ವಂಸಗೊAಡ ಹಿಂದು ಧರ್ಮದ ಶ್ರದ್ಧಾ ಕೇಂದ್ರ, ತೀರ್ಥ ಕ್ಷೇತ್ರಗಳನ್ನು ಪುನರುಜ್ಜೀವನ ಮಾಡಿ ಪುಣ್ಯ ಕ್ಷೇತ್ರಗಳಿಗೆ ವೈಭವದ ಕಳೆ ತಂದಿರುವ ಶ್ರೇಯ ಅಹಲ್ಯಾಬಾಯಿ ಅವರಿಗೆ ಸಲ್ಲುತ್ತದೆ ಎಂದರು.

೧೯೬೭ರಲ್ಲಿ ಮಾಳವ ಪ್ರಾಂತ್ಯದ ಸಾಮ್ರಾಜ್ಯದ ಅಧಿಪತಿಯಾಗಿ ೨೮ ವರ್ಷ ರಾಜ್ಯಭಾರ ಮಾಡಿದ ರಾಜಮಾತೆ ಅಹಲ್ಯಾಬಾಯಿ, ಸಂಪತ್ಭರಿತ ಸಾಮ್ರಾಜ್ಯ ಕಟ್ಟುವ ಜತೆಗೆ ಹಿಂದು ಧರ್ಮದ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಜೀವ ತುಂಬಿದರು. ಸನಾತನಕ್ಕೆ ಎದುರಾದ ಅಡೆ ತಡೆಗಳಿಗೆ ಸಿಂಹ ಸ್ವಪ್ನವಾಗಿ ಪತನವಾದ ಹಲವು ಪುಣ್ಯ ಕ್ಷೇತ್ರಗಳಿಗೆ ಮೆರುಗು ನೀಡಿ ಹಾಗೂ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಿದರು ಎಂದರು.

ಕಾಶಿ, ಅಯೋಧ್ಯೆ, ಖುಷಿಕೇಷ, ಗಯಾ, ಪಂಡರಾಪುರ, ತ್ರಂಬಕೇಶ್ವರ, ಗೋಕರ್ಣ, ಪ್ರಯಾಗ್‌ರಾಜ, ಇಂದೋರ್ ಸೇರಿ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಮರುಜೀವ ಕೊಟ್ಟು, ಮಂದಿರ ವೈಭವದಿಂದ ಕಂಗೊಳಿಸುವ ಹಾಗೇ ಮಾಡಿದ ಕೀರ್ತಿ ಇವರಿಗೆ ಸಲ್ಲಲಿದೆ.ಪುಣ್ಯಕ್ಷೇತ್ರ ಕಾಶಿಯಿಂದ ಕೊಲ್ಕತ್ತಾವರೆಗೆ ಮತ್ತು ಬದರಿನಾಥ್‌ದಿಂದ ರಾಮೇಶ್ವರಂವರೆಗಿನ ಹೆz್ದÁರಿಗಳ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಜಿಮ್ಸ್ ನರ್ಸಿಂಗ್ ಕಾಲೇಜಿನ ಮುಖ್ಯಸ್ಥೆ ಪ್ರೊ.ಗೀತಾ ವಿ.ರಸಾಳಕರ್ ಮಾತನಾಡಿದರು. ಕೇಶವ ಸೇವಾ ಸಮಿತಿ ಅಧ್ಯP್ಷÀ ಗಿರೀಶ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿದರು. ಸಾಮರಸ್ಯ ವೇದಿಕೆಯ ಜಿ¯್ಲÁ ಸಂಯೋಜಕ ಸೂರ್ಯಕಾಂತ, ಸಹ ಸಂಯೋಜಕ ಶ್ರೀಶೈಲ ಮೂಲಗೆ, ಸರಸ್ವತಿ ಹೆಬ್ಬಾರ, ಕೃಷ್ಣ ಜೋಶಿ, ವಿಜಯ ಮಹಾಂತೇಶ, ಅರವಿಂದ್ ಹುಣಸಗಿ, ಮಹಾದೇವಯ್ಯ ಕರದಳ್ಳಿ, ಸಾಗರ ಸತಾಳಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net