ಧರ್ಮ ಕಾರ್ಯಗಳಿಂದ ಸುಖ, ಸಮೃದ್ಧಿ: ಬಿ.ವೈ.ರಾಘವೇಂದ್ರ

SKP WEEEB
Published on

ಶಿಕಾರಿಪುರ: ಧರ್ಮ ಕಾರ್ಯಗಳಿಂದ ಲೋಕ ಕಲ್ಯಾಣವಾಗುತ್ತದೆ. ಸುಖ, ಸಮೃದ್ಧಿ ದೊರೆಯುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸೋಮವಾರ ನವರಾತ್ರಿಯ ಮೊದಲ ದಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಕುಂಬಾರಗುಂಡಿಯ ರೇಣುಕ ಮಂದಿರದಲ್ಲಿ ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿದ್ದ ನವಚಂಡಿಕಾ ಯಾಗದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ನವರಾತ್ರಿಯ ಶುಭ ದಿನ, ಯಾಗ-ಯಜ್ಞಾದಿಗಳು ಮನಸಿಗೆ ನೆಮ್ಮದಿ ನೀಡುವುದಲ್ಲದೆ ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ ಆಚರಣೆ ಮತ್ತು ಸಂಪ್ರದಾಯಗಳನ್ನು ನಮಗೆ ನೆನಪು ಮಾಡಿಕೊಡುತ್ತವೆ. ಯಾಗದ ಫಲದಿಂದ ನಮ್ಮ ಮಣ್ಣು ಪುಣ್ಯದ ಮಣ್ಣಾಗುತ್ತದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net