ಚಾಮರಾಜನಗರ: ಬುಡಕಟ್ಟು ಸಮುದಾಯದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನೆ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವ ಹಾಗೂ ಧರ್ತಿ ಆಬಾ ಜನ ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಯೋಜನೆಯಡಿ ಜಾಗೃತಿ ಮತ್ತು ಸೌಲಭ್ಯ ಶಿಬಿರವನ್ನು ಜೂ.17 ರಿಂದ 27ರವರೆಗೆ ಚಾಮರಾಜನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಯೋಜಿಸಲಾಗಿದೆ.
ಜೂ.17ರಂದು ಕಣ್ಣೇಗಾಲ ಗ್ರಾಮದ ಮಾರಮ್ಮನ ದೇವಸ್ಥಾನ, 19ರಂದು ಯಾನಗಹಳ್ಳಿಯ ವಾಲ್ಮೀಕಿ ಭವನ, 23 ಮತ್ತು 24ರಂದು ಮೇಲ್‌ಮಾಳ ಗ್ರಾಮಕ್ಕೆ ಸಂಬಂಧಿಸಿದಂತೆ ಮುರಟಿಪಾಳ್ಯದ ಬುಡಕಟ್ಟು ಆಶ್ರಮ ಶಾಲೆ ಹಾಗೂ ಜೂ.27ರಂದು ಬೇಡಗುಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಕಾಡಿಗೆರೆಯ ಟಿ.ವಿ.ಎಸ್. ಕಾಫಿ ಎಸ್ಟೇಟ್ ನಲ್ಲಿ ಶಿಬಿರಗಳು ನಡೆಯಲಿವೆ ಎಂದು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.