ಧರೆಗುರುಳಿದ ಬೃಹತ್ ಮರ : ವಾಹನಗಳು ಜಖಂ

ಧರೆಗುರುಳಿದ ಬೃಹತ್ ಮರ : ವಾಹನಗಳು ಜಖಂ
Published on

ಹಾಸನ : ನಗರದ ಶಂಕರಮಠ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಹಲವು ವಾಹನಗಳು ಜಖಂಗೊಂಡಿವೆ.

ಬೆಳಗಿನ ವೇಳೆ ಹೆಚ್ಚಿನ ವಾಹನಗಳ ಸಂಚಾರ ಇಲ್ಲದಿರುವ ಕಾರಣ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ಮರದ ಬಳಿ ನಿಲ್ಲಿಸಿದ್ದ ಒಂದು ಇನ್ನೋವಾ ಕಾರು ಮತ್ತು ಎರಡು ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ.

ಶಂಕರಮಠ ರಸ್ತೆ, ಸಂಪಿಗೆ ರಸ್ತೆ ಹಾಗೂ ಎಂ.ಜಿ. ರಸ್ತೆಯ ಇಕ್ಕೆಲಗಳಲ್ಲಿ ಬೇರು ಸಡಿಲಗೊಂಡಿರುವ ದೊಡ್ಡ ಗಾತ್ರದ ಹತ್ತಾರು ಮರಗಳು ಇವೆ. ಮಳೆ, ಗಾಳಿಗೆ ಉರುಳಿ ಬೀಳುವ ಅಪಾಯ ಇರುವುದರಿಂದ ಅರಣ್ಯ ಇಲಾಖೆ ತಕ್ಷಣ ಈ ಮರಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net