ಧರಿ ತಾಂಡಾದಲ್ಲಿ 62 ಕೆಜಿ ಗಾಂಜಾ ಜಪ್ತಿ

1209 Chincholi 01
Published on

ಚಿಂಚೋಳಿ: ಲಚ್ಚು ನಾಯಕ ತಾಂಡಾದಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾದ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು, ಶುಕ್ರವಾರ ತಡರಾತ್ರಿ ಸಲಗರ ಬಸಂತಪುರ ಗ್ರಾಪಂ ವ್ಯಾಪ್ತಿಯ ಧರಿ ತಾಂಡಾದಲ್ಲಿ ಅಕ್ರಮವಾಗಿ ಬೆಳೆದಿದ್ದ 62 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿಯಾಗುತ್ತಲೇ ಪರಾರಿಯಾಗಿದ್ದಾನೆ. ಈ ಹಿಂದೆ ಸಂಗಾಪುರ ಮತ್ತು ಮೊನಕಪುರದಲ್ಲಿ ಗಾಂಜಾ ಜಪ್ತಿ ಮಾಡಿಕೊಂಡಿದ್ದರು.
ಧನಸಿಂಗ ರಾಮಚಂದ್ರ ರಾಠೋಡ್ ಎಂಬುವರ ಮನೆ ಮತ್ತು ಸಮೀಪದ ಹೊಲದ ಮೇಲೆ ದಾಳಿ ನಡೆಸಿ 2.65 ಲಕ್ಷ ಮೌಲ್ಯದ ಒಂದು ಕೆಜಿ ಒಣಗಿದ ಮತ್ತು 61 ಕೆಜಿ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಧನಸಿಂಗ ತನ್ನ ಮನೆ ಎದುರು ಮತ್ತು ಹಿಂಬದಿಯ ಜಮೀನಿನಲ್ಲಿ ಗಾಂಜಾ ಬೆಳೆದಿದ್ದು ಪತ್ತೆಯಾಗಿದೆ ಎಂದು ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ ತಿಳಿಸಿದ್ದಾರೆ.
ಡಿವೈಎಸ್ಪಿ ಇ.ಎಸ್. ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ್ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಶೇಖರ ರಾಠೋಡ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಧನಸಿಂಗ ಪರಾರಿಯಾಗಿದ್ದಾನೆ. ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net