

ಬಸವಕಲ್ಯಾಣ: ಧನ್ನೂರ (ಕೆ) ಗ್ರಾಮದಲ್ಲಿ ಬುಧವಾರ ರಾತ್ರಿ ಅಪರಿಚಿತರು ಮಸೀದಿ ಮೇಲೆ ಭಗವಾ ಧ್ವಜ ಹಾರಿಸಿದ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಹುಮನಾಬಾದ್ ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ ಸ್ಥಳಕ್ಕೆ ್ನ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರ ಸಹಕಾರದಲ್ಲಿ ಭಗವಾ ಧ್ವಜನವನ್ನು ತೆರವುಗೊಳಿಸಲಾಯಿತು.
ಡಿವೈಎಸ್‌ಪಿ ನ್ಯಾಮಗೌಡರ ಗ್ರಾಪಂ ಕಚೇರಿಯಲ್ಲಿ ಎರಡು ಸಮುದಾಯದವರ ಪ್ರಮುಖರ ಶಾಂತಿ ಸಭೆ ನಡೆಸಿ ಮಾತನಾಡಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಕಿಡಿಗೇಡಿಗಳು ಯಾರೇ ಇದ್ದರೂ ನಮ್ಮ ಇಲಾಖೆ ಹೆಡೆಮುರಿ ಕಟ್ಟುತ್ತದೆ. ಇಂಥ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದರು.
ಮುಂಜಾಗೃತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಠಾಳ ಸಿಪಿಐ ವಿಜಯಕುಮಾರ, ಗ್ರಾಮೀಣ ಠಾಣೆ ಪಿಎಸ್‌ಐ ವಸೀಮ್ಪ ಟೇಲ್ ಇತರರಿದ್ದರು.