

ಸರಗೂರು ತಾಲೂಕಿನ ನೇಮ್ಮನಹಳ್ಳಿ ಗ್ರಾಮದ ದೇವೇಶ್ ಎಂಬುವರು ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ವಾಹನ ಚಾಲಕರ ಸಂಘದ ವತಿಯಿಂದ ಅವರ ಮನೆಗೆ ತೆರಳಿ ಕುಟುಂಬದವರಿಗೆ 25 ಸಾವಿರ ರೂ. ಧನಸಹಾಯದ ಚೆಕ್ ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಎಸ್.ಎಚ್.ಲಿಂಗರಾಜು, ಎಸ್.ಬಿ.ಕಾಳನಾಯಕ, ಪ್ರಧಾನ ಕಾರ್ಯದರ್ಶಿ ಚಾಮರಾಜ, ಖಜಾಂಚಿ ಎಸ್.ಟಿ.ರವಿ, ಸದಸ್ಯ ನಾಗರಾಜು ಇದ್ದರು.