ಧನಲಕ್ಷ್ಮೀ ಮಂಜೇಗೌಡ ಅವಿರೋಧ ಆಯ್ಕೆ

04-kkr1(10-24 anegula gp vp ele
Published on

ವಿಜಯವಾಣಿ ಸುದ್ದಿಜಾಲ ಕಿಕ್ಕೇರಿ

ಹೋಬಳಿಯ ಗಡಿಭಾಗದ ಆನೆಗೊಳ ಗ್ರಾಪಂ ಉಪಾಧ್ಯಕ್ಷರಾಗಿ ಅಂಚೆಬೀರನಹಳ್ಳಿ ಧನಲಕ್ಷ್ಮೀ ಮಂಜೇಗೌಡ ಸೋಮವಾರ ಅವಿರೋಧ ಆಯ್ಕೆಯಾದರು.

ಎ.ಪಿ. ನಂಜೇಶ್ ಉಪಾಧ್ಯಕ್ಷ ಸ್ಥಾನಕ್ಕೆ (ಒಡಂಬಡಿಕೆ ಸೂತ್ರದಂತೆ) ರಾಜೀನಾಮೆ ನೀಡಿದ್ದರು. ಸೋಮವಾರ ಚುನಾವಣೆ ಪ್ರಕ್ರಿಯೆ ಮೊದಲು ಧನಲಕ್ಷ್ಮೀ ಹೊರತುಪಡಿಸಿ ಬೇರೆ ಯಾರೂ

ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸಂತೋಷ್‌ಕುಮಾರ್, ಸಹಚುನಾವಣಾಧಿಕಾರಿ ಅನಿಲ್‌ಬಾಬು, ಪಿಡಿಒ ರವಿಕುಮಾರ್, ಲೆಕ್ಕ ಸಹಾಯಕ ನವೀನ್ ಕುಮಾರ್ ಕರ್ತವ್ಯ ನಿರ್ವಹಿಸಿದರು. ಧನಲಕ್ಷ್ಮೀ ಅವರಿಗೆ ಅಭಿಮಾನಿಗಳು, ಕಾರ್ಯಕರ್ತರು ಪುಷ್ಪಮಾಲೆ ಅರ್ಪಿಸಿ, ಸಿಹಿ ತಿನಿಸಿ ಶುಭ ಕೋರಿದರು.

ಜೆಡಿಎಸ್ ಮುಖಂಡರಾದ ಸಿ.ಎನ್. ಪುಟ್ಟಸ್ವಾಮಿಗೌಡ, ಬಿ.ಎಂ. ಕಿರಣ್, ಐಕನಹಳ್ಳಿ ಕೃಷ್ಣೇಗೌಡ, ಬಿ.ಎಸ್. ಮಂಜುನಾಥ್, ಗ್ರಾಪಂ. ಸದಸ್ಯರಾದ ಎ.ಪಿ. ನಂಜೇಶ್, ಕಡಹೆಮ್ಮಿಗೆ ರಮೇಶ್, ಭಾಗ್ಯಮ್ಮ ಶಿಶುಪಾಲ್, ಎಲ್.ಪಿ. ಮಹಾಲಕ್ಷಿ ವಿಶ್ವನಾಥ್, ಬಿ.ಎನ್. ಯೋಗೇಶ್, ಪಿ. ಪ್ರಕಾಶ, ಸಿ.ಆರ್. ಗಂಗಾಧರ್, ಮಂಜಶೆಟ್ಟಿ, ವೈ.ಎಲ್. ರುಕ್ಮಿಣಿ ನಾರಾಯಣ್, ನಾಗಮ್ಮ , ಲಕ್ಷ್ಮೀ ರಮೇಶಬಾಬು, ರಂಜಿತಾ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net