ಧನಂಜಯ್, ಭಾಗ್ಯಮ್ಮ ಅವಿರೋಧ ಆಯ್ಕೆ

ಹರವೆ ಗ್ರಾಪಂ ಚುನಾವಣೆ
ಹುಣಸೂರು ತಾಲೂಕು ಹರವೆ ಗ್ರಾಮಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಧನಂಜಯ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾಗ್ಯಮ್ಮ ಅವರನ್ನು ಜಿ.ಡಿ.ಹರೀಶ್‌ಗೌಡ ಸನ್ಮಾನಿಸಿದರು. ಹರವೆ ಶ್ರೀಧರ್, ಶೈಲಾನಾಯಕ,, ನಾಗರಾಜ್, ಆಶಾ, ಪುಷ್ಪಾ, ಮಹೇಶ್ ಇತರರಿದ್ದರು.
Published on

ಹುಣಸೂರು: ತಾಲೂಕಿನ ಹರವೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಧನಂಜಯ್ ಹಾಗೂ ಉಪಾಧ್ಯಕ್ಷರಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಒಂಬತ್ತು ಜನ ಪಾಲ್ಗೊಂಡಿದ್ದು ಐದು ಸದಸ್ಯರು ಗೈರು ಹಾಜರಾಗಿದ್ದರು ಎಂದು ಚುನಾವಣಾಧಿಕಾರಿ ಹಾರಂಗಿ ಇಇ ಸುರೇಶ್ ತಿಳಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಬಳಿಕ ಮಾತನಾಡಿ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಳ್ಳಿಗಳಲ್ಲಿ ನೀರು, ಸೂರು ಒದಗಿಸುವುದು ಮತ್ತು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಸ್ಥಳಿಯ ಅಧಿಕಾರಿಗಳ ವಿಶ್ವಾಸಗಳಿಸಿ ಕೆಲಸ ಮಾಡುವಂತೆ ತಿಳಿಸಿದರು. ಸರ್ಕಾರದ ಮಟ್ಟದಲ್ಲಿ ಸಚಿವರ ಜತೆ ಮಾತುಕತೆ ನಡೆಸಿ ತಾಲೂಕಿಗೆ ಹೆಚ್ಚು ಮನೆಗಳನ್ನು ತರಲು ಶ್ರಮಿಸುತ್ತೇನೆ. ನೀವು ಗ್ರಾಮ ಸಭೆ ನಡೆಸಿ, ಪಕ್ಷ ಭೇದ ಮರೆತು ಅರ್ಹರಿಗೆ ಸವಲತ್ತುಗಳನ್ನು ಕೊಡಿಸುವ ಕೆಲಸ ಮಾಡಿ ಎಂದರು.

ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಸದಸ್ಯರಾದ ಆಶಾ, ಪುಷ್ಪಾ, ಮಹೇಶ್, ಪಂಚಾಕ್ಷರಿ, ಶಾಂತರಾಜು, ಸ್ವಾಮೀಗೌಡ, ರೂಪಾ, ಶೈಲಾನಾಯಕ, ನಾಗರಾಜ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net