ದ್ವೇಷದ ಆಡಳಿತ ವ್ಯವಸ್ಥೆಯಿಂದ ವಾನವನ ಹಕ್ಕು ಉಲ್ಲಂಘನೆ: ಡಾ.ಸಿ.ಬಸವರಾಜು ಬೇಸರ

2
Published on

ಮೈಸೂರು: ವೈಯಕ್ತಿಕ ದ್ವೇಷದ ಆಡಳಿತ ವ್ಯವಸ್ಥೆಯಿಂದಾಗಿ ವಾನವನ ಹಕ್ಕಿನ ಉಲ್ಲಂಘನೆಂಾಗುತ್ತಿದ್ದು, ಇತ್ತೀಚಿನ ರಷ್ಯಾ-ಉಕ್ರೇನ್, ಸುಡಾನ್ ಸಂಘರ್ಷಗಳೇ ಇದಕ್ಕೆ ಉದಾಹರಣೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಂುದ ಕುಲಪತಿ ಡಾ.ಸಿ.ಬಸವರಾಜು ಬೇಸರ ವ್ಯಕ್ತಪಡಿಸಿದರು.
ಮಹಾಜನ ಕಾನೂನು ಕಾಲೇಜು, ಮಹಾಜನ ಶೈಕ್ಷಣಿಕ ಸೊಸೈಟಿ ಸಹಯೋಗದಲ್ಲಿ ಕಾಲೇಜಿನ ಸುಬ್ಬಲಕ್ಷ್ಮಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಅಂತಾರಾಷ್ಟ್ರೀಂು ಮಟ್ಟದ ಸಂಬಂಧ ಉಳಿಸುವಲ್ಲಿ ವಾನವ ಹಕ್ಕಿನ ಪಾತ್ರ’ ಕುರಿತ ಕಾಂರ್ಾಗಾರ ಉದ್ಘಾಟಿಸಿ ಅವರು ವಾತನಾಡಿದರು.
ಎರಡನೇ ಮಹಾಂುುದ್ಧದ ನಂತರ ಮಾನವ ಹಕ್ಕಿನ ಮಹತ್ವವನ್ನು ಪ್ರಪಂಚ ಅರಿತು ಒಪ್ಪಿಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಪ್ರತಿಷ್ಠೆಗಾಗಿ ಂುುದ್ಧಗಳು ನಡೆಂುುತ್ತಿದ್ದು, ಇದು ವಾನವ ಹಕ್ಕಿನ ಉಲ್ಲಂಘನೆಂಾಗುತ್ತಿದೆ ಎಂದರು.
ಮಾನವ ಹಕ್ಕುಗಳು ಆತನ ಹುಟ್ಟಿನಿಂದಲೇ ಆರಂಭವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಹಿತಾಸಕ್ತಿಗಾಗಿ ಇತರರ ಹಕ್ಕನ್ನು ಕಸಿಂುುತ್ತಿರುವುದು ವಿಷಾದನೀಂು. ದುರಾಸೆಯಿಂದಾಗಿ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದಷ್ಟೂ ಹಿನ್ನಡೆ ಅನುಭವಿಸಿದ್ದಾನೆ. ಈ ಕಾರಣದಿಂದಲೇ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ಲೇಷಿಸಿದರು.
ವಾನವ ಹಕ್ಕುಗಳ ಉಲ್ಲಂಘನೆಗಳಾದಾಗ ಅವನ್ನು ಭಾರತ ಖಂಡಿಸುವ ಕಾಂರ್ು ವಾಡಿದೆ. ಆದರೆ ಇತರ ರಾಷ್ಟ್ರಗಳಿಂದಲೂ ಇದೇ ರೀತಿಂು ಸಹಕಾರ ದೊರೆತರೆ ಬಾಂಧವ್ಯ ಗಟ್ಟಿಂಾಗಲು ಸಾಧ್ಯ. ವಾನವ ಹಕ್ಕುಗಳು ಕೇವಲ ವೈಂುಕ್ತಿಕ ಬದುಕು ಅಥವಾ ಅಭಿಪ್ರಾಯಗಳಿಗೆ ಸೀಮಿತವಾಗಿಲ್ಲ. ಅವು ಭಾಷೆ, ಪ್ರಾಂತ್ಯದ ಕಟ್ಟುಪಾಡುಗಳನ್ನು ಮೀರಿದ ಸ್ವಾತಂತ್ರೃವನ್ನು ನೀಡುತ್ತವೆ ಎಂದರು.
ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ಮುರಳೀಧರ ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾಂರ್ುದರ್ಶಿ ಡಾ.ಟಿ.ವಿಜಂುಲಕ್ಷ್ಮಿ ಮುರಳೀಧರ್, ಟಿಬೆಟನ್ ಆಡಳಿತ ಕೇಂದ್ರದ ಸಚಿವರಾದ ನಾರ್ಜಿನ್ ಡೊಲ್ಮಾ, ಪೂಜಾ ಭಾಗವತ್ ಮೆಮೋರಿಯಲ್ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾಂರ್ು, ಪ್ರಾಂಶುಪಾಲ ಪ್ರೊ.ಎಂ.ಎಂ.ಪ್ರಭುಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net