

ಕಲಬುರಗಿ:ದ್ವೇಷ ಅಳಿಸೋಣ-ದೇಶ ಉಳಿಸೋಣ' ಶೀರ್ಷಿಕೆಯಡಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ರಾಜ್ಯಾದ್ಯಂತ ದಶ ದಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ತಾಜೋದ್ದೀನ್ ಇಲಕಲ್ ಹೇಳಿದರು.
ಬುಧವಾರದಿಂದ ಆರಂಭವಾಗಿದ್ದು, ನ.೧೦ರವರಗೆ ರಾಜ್ಯದೆಲ್ಲೆಡೆ ಅಭಿಯಾನ ನಡೆಯಲಿದೆ. ಭಿತ್ತಿಪತ್ರ ಬಿಡುಗಡೆ, ವಿಚಾರ ಗೋಷ್ಠಿ, ಕಾರ್ನರ್ ಮೀಟಿಂಗ್, ಸಾರ್ವಜನಿಕ ಸಭೆ, ಬೀದಿ ನಾಟಕ, ಬೈಕ್ ರ‍್ಯಾಲಿ, ರಾಷ್ಟಪತಿಗಳಿಗೆ ಮನವಿ ಸೇರಿ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ರಾಷ್ಟçದಲ್ಲಿ ಎ¯್ಲೆಡೆ ಅಶಾಂತಿ ಹಾಗೂ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ೨೦೧೪ರಿಂದ ದೇಶದಲ್ಲಿ ನಾನಾ ಬದಲಾವಣೆ ನಡೆದಿವೆ. ಒಂದು ನಿರ್ದಿಷ್ಟ ಸಮುದಾಯ ಹಿಂದುಳಿದ ವರ್ಗಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಶಾ ಖುರೇಷಿ, ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್, ಜಿಲ್ಲಾಧ್ಯಕ್ಷ ಎಂ.ಎ.ಖದೀರ್, ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಚಕರಾ, ಯಾದಗಿರಿ ಜಿಲ್ಲಾಧ್ಯಕ್ಷ ಮಹ್ಮದ್ ಸಲೀಂ ಇದ್ದರು.