ದ್ವೀತಿಯ ಪಿಯುಸಿ ಪರೀಕ್ಷೆ ಆರಂಭ

Published on

ವಿಜಯಪುರ: ಜಿಲ್ಲೆಯಾದ್ಯಂತ 63 ಪರೀಾ ಕೇಂದ್ರಗಳಲ್ಲಿ ಮಾ. 1 ರಿಂದ ಮಾ. 20 ರವರೆಗೆ ದ್ವೀತಿಯ ಪಿಯುಸಿ ವಾರ್ಷಿಕ ಪರೀೆಗಳು ಜರುಗಲಿದ್ದು, ಸುವ್ಯವಸ್ಥಿತ ಪರೀಕ್ಷೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಪರೀಾ ಕೇಂದ್ರಗಳ ಸುತ್ತಲಿನ 200 ಮೀ. ಪ್ರದೇಶವನ್ನು ಭಾರತೀಯ ನಾಗರಿಕ ಸುರಾ ಸಂಹಿತೆ 2023 ಕಲಂ 163ರನ್ವಯ ನಿಷೇಧಿತ ಪ್ರದೇಶವೆಂದು ೂಷಿಸಿ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಟಿ. ಭೂಬಾಲನ್​ ಆದೇಶ ಹೊರಡಿಸಿದ್ದಾರೆ.

ಪರೀೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಇತರರು ಮೊಬೈಲ್​ ಫೋನ್​ ತರುವುದು ಹಾಗೂ ಬಳಸುವುದು ನಿಷೇಧಿಸಲಾಗಿದೆ. ಪರೀಕ್ಷೆ ಗಳು ನಡೆಯುವ ದಿನಗಳಂದು ಪರೀಾ ಕೇಂದ್ರದ ಸಮೀಪದ ಝರಾಕ್ಸ್​ ಅಂಗಡಿಗಳು, ಕಂಪ್ಯೂಟರ್​ ಸೆಂಟರ್​ಗಳು, ಸೈಬರ್​ ಕೆಫೆಗಳು, ಕೋಚಿಂಗ್​ ಕೇಂದ್ರಗಳು ತೆರೆಯದಂತೆ ನಿಷೇಧಿಸಿ ಆದೇಶಿಸಲಾಗಿದೆ.

ಪರೀಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಪುಸ್ತಕಗಳು, ಎಲೆಕ್ಟ್ರಾನಿಕ್​ ಗೆಜೆಟ್​, ಮೊಬೈಲ್​ ಪೋನ್​, ಡಿಜಿಟಲ್​ ವಾಚ್​ ಬಳಸುವುದು ಕೂಡ ನಿಷೇಧಿಸಲಾಗಿದೆ. ಪರೀಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಕೈಗೊಳ್ಳಲಾಗಿದೆ ಹಾಗೂ ಈ ಬಾರಿ ವೆಬ್​ ಕಾಸ್ಟಿಂಗ್​ ವ್ಯವಸ್ಥೆ ಇರಲಿದ್ದು, ಪರೀಕ್ಷೆ ಕೇಂದ್ರಗಳಲ್ಲಿ ನಿರಂತರ ವಿದ್ಯುತ್​ ಸಂಪರ್ಕ ವ್ಯವಸ್ಥೆ, ಇಂಟರ್​ ನೆಟ್​, ಸೂಕ್ತ ಗಾಳಿ&ಬೆಳಕಿನ ವ್ಯವಸ್ಥೆಯನ್ನು ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರು ಮಾಡಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್​ನಲ್ಲಿ ವಿದ್ಯಾರ್ಥಿಗಳು ತಮ್ಮ ಪರೀಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net