

ಹಾಸನ:ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರದಿಂದ ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾಗಿದ್ದು, ಪ್ರಥಮ ಪತ್ರಿಕೆ ಕನ್ನಡ ಪರೀಕ್ಷೆಗೆ ಒಟ್ಟು 597 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯಲ್ಲಿ ಒಟ್ಟು 14,743 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಅವರಲ್ಲಿ 14146 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ,
ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಕಾವಲು ಹಾಕಲಾಗಿತ್ತು. ಸಮೀಪದ ಜೆರಾಕ್ಸ್, ಸೈಬರ್ ಮತ್ತು ಕಂಪ್ಯೂಟರ್ ಕೇಂದ್ರಗಳನ್ನು ಬಂದ ಮಾಡಿಸಲಾಗಿತ್ತು. ಗುರುವಾ ಹಾಸನ ತಾಲೂಕಿನಲ್ಲಿ 173 ವಿದ್ಯಾರ್ಥಿಗಳು, ಅರಸೀಕೆರೆ 120, ಚನ್ನರಾಯಪಟ್ಟಣ 142, ಅರಕಲಗೂಡು 62, ಹೊಳೆನರಸೀಪುರ 49, ಬೇಲೂರು 20, ಆಲೂರು 8 ಮತ್ತು ಸಕಲೇಶಪುರ ತಾಲೂಕಿನ 23 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ ತಮ್ಮನ್ನು ಭೇಟಿ ಆದ ಸುದ್ದಿಗಾರರಿಗೆ ಮಾಹಿತಿ ನೀಡಿದರು