ದ್ವಿತೀಯ ಪಿ.ಯು.ಸಿ ಎರಡನೇ ಪೂರಕ ಪರೀಕ್ಷೆ ಜವಾಬ್ದಾರಿಯಿಂದ ನಡೆಸಿ

ದ್ವಿತೀಯ ಪಿ.ಯು.ಸಿ ಎರಡನೇ ಪೂರಕ ಪರೀಕ್ಷೆ ಜವಾಬ್ದಾರಿಯಿಂದ ನಡೆಸಿ
Published on

ಹಾಸನ: ದ್ವೀತಿಯ ಪಿ ಯು.ಸಿ ಎರಡನೇ ಪೂರಕ ಪರೀಕ್ಷೆಯು ಆ.21 ರಿಂದ ಸೆ.2 ರವರೆಗೆ ನಡೆಯಲಿದ್ದು, ಯಾವುದೇ ಲೋಪದೋಷವಾಗದಂತೆ ಜವಾಬ್ದಾರಿಯಿಂದ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಕೆ. ಟಿ. ಶಾಂತಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲಿ ಶನಿವಾರ ಪೂರಕ ಪರೀಕ್ಷೆ ಸಂಬಂದ ಈಗಾಗಲೇ ವಹಿಸಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2,993 ಅಭ್ಯರ್ಥಿಗಳು ನೊಂದಾಯಿಸಿ ಕೊಂಡಿದ್ದು, ಹಾಸದಲ್ಲಿ 3 ಪರೀಕ್ಷಾ ಕೇಂದ್ರಗಳು ಹಾಗೂ ಪ್ರತಿ ತಾಲ್ಲೂಕಿನಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪ್ರಶ್ನೆ ಪತ್ರಿಕೆಯನ್ನು ನಿಗದಿತ ಸಮಯಕ್ಕೆ ವಿತರಣೆ ಮಾಡಲು ಹಾಗೂ ಪರೀಕ್ಷೆ ಮುಗಿದ ತಕ್ಷಣ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತಲಪಿಸಲು ಅಗತ್ಯ ಕ್ರಮವಹಿಸಲು ಸೂಚನೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹದೇವಪ್ಪ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net