ದ್ವಿಚಕ್ರ ವಾಹನಗಳ ತಪಾಸಣೆ ಕಾರ್ಯ.

ದ್ವಿಚಕ್ರ ವಾಹನಗಳ ತಪಾಸಣೆ ಕಾರ್ಯ.
Published on


ಅರಕಲಗೂಡು: ಎಲ್ಲ ವಾಹನ ಸವಾರರು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಗಟ್ಟುವ ಮುಖೇನ ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಸಿಪಿಐ ಎಸ್.ಎಂ. ರಘುಪತಿ ತಿಳಿಸಿದರು.

ಪಟ್ಟಣದ ಅನಕೃ ವೃತ್ತದಲ್ಲಿ ಶುಕ್ರವರ ದ್ವಿಚಕ್ರ ವಾಹನಗಳ ತಪಾಸಣೆ ನಡೆಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಪಟ್ಟಣದಲ್ಲಿ ವಾಹನಗಳ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕು ಎಂದರು. ತಾಲೂಕಿನಾದ್ಯಂತ ಬೈಕ್ ಸವಾರರು ಹೆಲ್ಮೆಂಟ್ ಧರಿಸಬೇಕು. ಇಲ್ಲವಾದರೆ 500 ರೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಣದ ಸಂತೆಮಾಳ, ಅನಕೃ ವೃತ್ತ, ಇಂದಿರಾ ಕ್ಯಾಂಟಿನ್ ಸಮೀಪದಲ್ಲಿ ನಿಯಮಾನುಸಾರ ವಾಹನಗಳ ನಿಲುಗಡೆ ಮಾಡಬೇಕು. ಅಲ್ಲದೆ ರಸ್ತೆ ಬದಿ ವ್ಯಾಪಾರಿಗಳು ಕೂಡ ಸಂಚಾರಕ್ಕೆ ಅಡಚಣೆ ಆಗದಂತೆ ಗಮನಹರಿಸಿ ವ್ಯವಹಾರ ಕೈಗೊಳ್ಳಬೇಕು ಎಂದರು.

ಅಪ್ರಾಪ್ತ ಬಾಲಕರು, ಬಾಲಕಿಯರಿಗೆ ದ್ವಿಚಕ್ರ ವಾಹನಗಳನ್ನು ಪೋಷಕರು ಕೊಡಬಾರದು. ಇಂತವರನ್ನು ಸಹ ನಿತ್ಯವೂ ತಪಾಸಣೆಗೆ ಒಳಪಡಿಸಲಾಗುವುದು. ಲೋಪಕಂಡು ಬಂದರೆ ಸಾವಿರಾರ ರೂ ಕೋರ್ಟ್ ಮೂಲಕ ಕಟ್ಟಬೇಕಾಗುತ್ತದೆ ಅಲ್ಲದೆ ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳುವಳಿಕೆ ನೀಡಿದರು.

ಸಬ್ ಇನ್ಸ್ಪೆಕ್ಟರ್ ಧನರಾಜ್, ಸಿಬ್ಬಂದಿಗಳು ಹಾಜರಿದ್ದು ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net