ದ್ವಿಚಕ್ರ ವಾಹನ ಡಿಕ್ಕಿ; ವಾಹನಗಳು ಜಕಂ

ದ್ವಿಚಕ್ರ ವಾಹನ ಡಿಕ್ಕಿ; ವಾಹನಗಳು ಜಕಂ
Published on

ಹೊಳೆನರಸೀಪುರ  : ಪಟ್ಟಣದ ಪೇಟೆ ಮುಖ್ಯ ರಸ್ತೆಯ ಕಾವೇರಿ ಗ್ರಾಮೀಣ ಬ್ಯಾಂಕ್ ಹತ್ತಿರ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಬುಲೆಟ್ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವೃದ್ಧ ವೆಂಕಟಪ್ಪ(70) ಗಂಭೀರವಾಗಿ ಗಾಯಗೊಂಡಿದ್ದಾರೆ ಜತೆಗೆ ಎರಡು ವಾಹನಗಳು ಜಕಂ ಗೊಂಡಿದೆ.

  ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿನಿಯರು ಬೆಳಿಗ್ಗೆ ಕಾಲೇಜಿಗೆ ತೆರಳುವ ಸಂದರ್ಭದಲ್ಲಿ ಅವರುಗಳಲ್ಲಿ ಪ್ರಭಾವ ಬೀರುವ ಸಲುವಾಗಿ  ಅತಿವೇಗವಾಗಿ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.  ಪುರಸಭೆ ಮೂರನೇ ವಾರ್ಡಿನ ಸದಸ್ಯ ಶಬ್ಬೀರ್ ಹುಸೇನ್ ಅವರ ಅಪ್ರಾಪ್ತ ಪುತ್ರ ಕೆಎ 05, ಜೆಕ್ಯೂ 5445 ನಂಬರ್ ಬುಲೆಟ್ ದ್ವಿಚಕ್ರ ವಾಹನ ಅತಿವೇಗ ಹಾಗೂ ಅಜಾಗರೂಕತೆಯ  ಚಾಲನೆಯಿಂದ ನಡೆದ ಅಪಘಾತದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳು ಜಕ್ಕಂಗೊಂಡಿದೆ ಜತೆಗೆ ವಯೋವೃದ್ಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಾಲಕ ಇದೇ ರೀತಿ ಐದಾರು ಅಪಘಾತಗಳನ್ನು ಮಾಡಿದ್ದಾನೆ ಮತ್ತು ಪೋ಼ಕರು ಪ್ರಭಾವ ಬಳಸಿ, ರಾಜಿ ಸಂಧಾನದ ಮೂಲಕ ದೂರು ದಾಖಲಾಗುವಂತೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ‌. ಬಾಲಕನ ಅತಿಯಾದ ವೇಗಧ  ಚಾಲನೆ ಮತ್ತು ಅಪಘಾತದ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಆದ್ದರಿಂದ ಬಾಲಕನಿಗೆ ವಾಹನ ನೀಡಿದ ವಾಹನ ಮಾಲೀಕನ ವಿರುದ್ಧ ಕೇಂದ್ರ ಸರ್ಕಾರದ ನೂತನ ವಾಹನ ಕಾಯ್ದೆ ಅನ್ವಯ ಕಾನೂನು ಕ್ರಮಕ್ಕೆ ನಾಗರೀಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net