ದ್ವಿಚಕ್ರ ವಾಹನ ಕಳ್ಳರ ಬಂಧನ

01
Published on

ಸವದತ್ತಿ: ಪಟ್ಟಣ ಸೇರಿ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಮೂವರನ್ನು ಸವದತ್ತಿ ಠಾಣೆ ಪೊಲೀಸರು ಶುಕ್ರವಾರ ಬಂ-ಧಿಸಿದ್ದಾರೆ. ರಾಮದುರ್ಗ ತಾಲೂಕಿನ ಚುಂಚುನೂರ ಗ್ರಾಮದ ದಿಲಾವರಸಾಬ್​ ಹಸನಸಾಬ್​ ನದ್​ಾ, ಕೀರಪ್ಪ ದುರ್ಗಪ್ಪ ಗಟ್ಟಿ ಹಾಗೂ ಸಿದ್ರಾಮ ಸಿದ್ದಪ್ಪ ಚುರುಮರಿ ಬಂಧಿತರು.

ಬಂಧಿತರಿಂದ ಸುಮಾರು 4 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾ-ಧಿಕಾರಿ ಸಂಜೀವ ಪಾಟೀಲ, ಡಿವೈಎಸ್ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸೈ ಶಿವಾನಂದ ಗುಡಗನಟ್ಟಿ ನೇತೃತ್ವದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಎಎಸ್​ಐ ಬಿ.ಆರ್​. ಸಣ್ಣಮಾಳಗಿ, ಬಿ.ವಿ. ಹಿರೇಮಠ, ಎಚ್​.ಬಿ. ವಾಸನ, ಎಂ.ಪಿ. ತೇರದಾಳ, ಎ.ಎಸ್​. ಕಪ್ಪತ್ತಿ, ಯು.ಡಿ. ಗಾಣಗಿ, ಎಸ್​.ಎಂ. ಜಾಧವ, ಬಿ.ಎ. ಮರಕಟ್ಟಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net