ದ್ವಿಚಕ್ರ ವಾಹನ ಕಳ್ಳನ ಬಂಧನ

29GPB1
11 ಬೈಕ್‌ಗಳನ್ನು ವಶಕ್ಕೆ ಪಡೆದ ಘಟಪ್ರಭಾ ಪೊಲೀಸರು.
Published on

ಘಟಪ್ರಭಾ: ಪಟ್ಟಣದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಘಟಪ್ರಭಾ ಪೊಲೀಸರು ಯಶಸ್ವಿಯಾಗಿದ್ದಾರೆ. ಜು. 23ರಂದು ಪಟ್ಟಣದ ಮಹಾಂತೇಶ ಬಸವಣ್ಣ ಸಂಕೇಶ್ವರ ಎಂಬುವವರು ಸ್ಥಳೀಯ ಬಾರ್ ಹತ್ತಿರ ನಿಲ್ಲಿಸಿದ್ದ ತನ್ನ ಟಿವಿಎಸ್ ಕಂಪನಿಯ ಮೋಟರ್ ಸೈಕಲ್ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಗುರುವಾರ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ರಾಯಬಾಗ ತಾಲೂಕಿನವನೆಂದು ತಿಳಿದು ಬಂದಿದ್ದು, ಅಂದಾಜು ಮೂರು ಲಕ್ಷಕ್ಕೂ ಹೆಚ್ಚಿನ ಮೌಲ್ಯದ 11 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಗೋಕಾಕ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ. ಗೋಕಾಕ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಪಿ.ಐ.ಶ್ರೀಶೈಲ ಬ್ಯಾಕೋಡ, ಅಪರಾಧ ವಿಭಾಗ ಮಹಿಳಾ ಪಿ.ಎಸ್.ಐ. ಎಂ.ಸಿ.ಹಿರೇಮಠ, ಕಾನೂನು ಸುವ್ಯವಸ್ಥೆ ಪಿ.ಎಸ್.ಐ. ಎಸ್.ಆರ್.ಕಣವಿ, ಸಿಬ್ಬಂದಿಗಳಾದ ಎ.ಎ.ಗಿಡ್ಡಪ್ಪಗೋಳ, ಎಂ.ಬಿ.ಕರಣಿ, ಬಿ.ಎಸ್.ನಾಯಿಕ, ಕೆ.ಆರ್.ಬಬಲೇಶ್ವರ, ಆರ್.ಪಿ.ಕುಗಟೋಳಿ, ಎಚ್.ಕೆ.ಮಲ್ಲಾಡದವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net