ದ್ವಾರಕಾ ಪೀಠಕ್ಕೆ ನೂತನ ಶ್ರೀ ಪಟ್ಟಾಭಿಷೇಕ

14 sri 3 web
Published on

ಶೃಂಗೇರಿ: ದ್ವಾರಕಾ ಪೀಠಾಧಿಪತಿಯಾಗಿ ನೇಮಕಗೊಂಡ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ಧಾರ್ವಿುಕ ಕಾರ್ಯಕ್ರಮದ ವಿಧಿವಿಧಾನಗಳನ್ನು ದ್ವಾರಕಾಧೀಶ ಮಂದಿರದಲ್ಲಿ ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಶುಕ್ರವಾರ ನೆರವೇರಿಸಿಕೊಟ್ಟರು.

ಪೀಠಾಧಿಪತಿಗೆ ಜಲಾಭಿಷೇಕ, ಹಿರಣ್ಯ, ರತ್ನಾಭಿಷೇಕ ಮತ್ತಿತರ ವಿಧಿಗಳು ಶ್ರೀಮಠದ ಪುರೋಹಿತ ಶಿವಕುಮಾರ್ ಶರ್ಮ ಅವರ ನೇತೃತ್ವದಲ್ಲಿ ನೆರವೇರಿದವು. ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ನಿರ್ದೇಶನದತೆ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಬುಧವಾರ ಗುಜರಾತ್ ರಾಜ್ಯದ ಪಶ್ಚಿಮಾಮ್ನಾಯ ದ್ವಾರಕಾ ಪೀಠಕ್ಕೆ ತೆರಳಿದ್ದರು. ಮಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುಜರಾತ್​ನ ಜಾಮ್ ನಗರಕ್ಕೆ ತೆರಳಿದರು. ಪೀಠದ ಶ್ರೀ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಬ್ರಹ್ಮೈಕ್ಯರಾದ ಹಿನ್ನೆಲೆಯಲ್ಲಿ ದ್ವಾರಕಾ ಪೀಠಾಧಿಪತಿಯಾಗಿ ನೇಮಕಗೊಂಡ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭಿಷೇಕ ನಡೆಯುತ್ತಿದೆ.

ಸೆಪ್ಟೆಂಬರ್​ನಲ್ಲಿ ಪುರಿ ಹಾಗೂ ದ್ವಾರಕಾ ಪೀಠಕ್ಕೆ ನೇಮಕಗೊಂಡ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀ ಅವಿಮುಕ್ತರೇಶ್ವರ ಸ್ವಾಮೀಜಿಗಳಿಗೆ ಶೃಂಗೇರಿ ಹಿರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರು ಪಟ್ಟಾಭಿಷೇಕದ ಧಾರ್ವಿುಕ ಕಾರ್ಯಕ್ರಮಕ್ಕೆ ಶೃಂಗೇರಿಯಲ್ಲಿ ಚಾಲನೆ ನೀಡಿದ್ದರು. ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಠದ ಪಶ್ಚಿಮ್ನಾಯ ಹಾಗೂ ಉತ್ತರಾಮ್ನಾಯ ಪೀಠಾಧಿಪತಿಗಳಿಗೆ ಪಟ್ಟಾಭಿಷೇಕ ಮಾಡುವ ಕಾರ್ಯಕ್ರಮ ಇದಾಗಿದೆ. ಈ ಹಿಂದೆ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಗಳು ಎರಡೂ ಪೀಠದ ಜವಾಬ್ದಾರಿ ಹೊಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net