ದ್ಯಾವಮನ ಗುಡಿಯಲ್ಲಿ ಕಳ್ಳತನ

crime logo
Published on

ಕಲಬುರಗಿ: ಬಳವಾಡ ಗ್ರಾಮದ ದ್ಯಾವಮ್ಮ ಗುಡಿಯಲ್ಲಿನ ದೇವಿ ಮೂರ್ತಿ ಮೇಲಿದ್ದ ಬಂಗಾರದ ತಾಳಿ, ಕಿವಿಯೋಲೆ, ಮೂಗುತ್ತಿ ಸೇರಿ ೪೦ ಸಾವಿರ ರೂ. ಮೌಲ್ಯದ ೧೧ ಗ್ರಾಂ ಬಂಗಾರ ಕಳ್ಳತನ ಮಾಡಿದ ಘಟನೆ ನಡೆದಿದೆ. ದೇವಸ್ಥಾನದ ಪೂಜಾರಿ ಬೆಳಗ್ಗೆ ೫.೩೦ಕ್ಕೆ ಪೂಜೆಗೆ ಹೋದಾಗ ಬಾಗಿಲು ಮುರಿದಿದ್ದು, ದೇವಿ ಮೇಲಿನ ಆಭರಣ ಕಳ್ಳತನವಾದ ಬಗ್ಗೆ ತಿಳಿದಿದೆ. ಅಪರಾಧಿಗಳನ್ನು ಪತ್ತೆ ಹಚ್ಚಿ ಎಂದು ಗ್ರಾಪಂ ಸದಸ್ಯ ಮನೋಹರ ಜ್ಞಾನಮಿತ್ರ ದೂರು ನೀಡಿದ್ದು, ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net