ದ್ಯಾಮವ್ವ, ದುರ್ಗಮ್ಮ ದೇವಿಯರ ಜಾತ್ರೆ ಸಂಪನ್ನ

7 Kalaghatagi 1 New
Published on

ಕಲಘಟಗಿ: ತಾಲೂಕಿನ ದೇವಿಕೊಪ್ಪ ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯರ ಪ್ರಥಮ ಜಾತ್ರಾ ಮಹೋತ್ಸವ 9 ದಿನಗಳ ಕಾಲ ನಿರಂತರ ವಿವಿಧ ಧಾರ್ವಿುಕ ವಿಧಿ-ವಿಧಾನಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

ಜಾತ್ರೆಯ ಕೊನೇ ದಿನವಾದ ಬುಧವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಉಭಯ ದೇವಿಯರ ನೂತನ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಡಿ ಮಜಲು, ಡೊಳ್ಳು ಕುಣಿತ, ಭಜನೆ, ಜಾಂಜ್

ಮತ್ತಿತರ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಸಹಸ್ರಾರು ಭಕ್ತರಿಂದ ಭಕ್ತಿ-ಭಾವದಿಂದ ಭಂಡಾರ ಹೊನ್ನಾಟ ಜರುಗಿತು.

ಪಾದಗಟ್ಟೆಯಲ್ಲಿ ದೇವಿಯರ ಮೂರ್ತಿಗಳನ್ನು ವಿರಾಜಮಾನಗೊಳಿಸಿ ಪೂಜೆ ಸಲ್ಲಿಸಲಾಯಿತು. ಮಧ್ಯರಾತ್ರಿ 12 ಗಂಟೆಯ ಬಳಿಕ ದೇವಸ್ಥಾನಕ್ಕೆ ತರಲಾಯಿತು.

ಶುಕ್ರವಾರ ಮೂರ್ತಿಗಳನ್ನು ಮರುಪ್ರತಿಷ್ಠಾಪಿಸಲಾಯಿತು. ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಶ್ರೀಗಳಿಂದ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಮೂರ್ತಿಗೆ ಜೀವಕಳೆ ತುಂಬಿ ವಿವಿಧ ಪೂಜೆ, ಧಾರ್ವಿುಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

ರಾಮಲಿಂಗೇಶ್ವರ ಮಠದ ಶ್ರೀ ಶ್ರವಣಾನಂದ ಸ್ವಾಮಿಗಳು, ವೇ.ಮೂ. ಸಂಗಯ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ 9 ದಿನ ವಿಶೇಷ ಪೂಜೆ, ಹೋಮ, ಹವನ, ಸಂಗೀತ, ರಸಮಂಜರಿ, ಧರ್ಮಸಭೆ ಕಾರ್ಯಕ್ರಮಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net