ದೌರ್ಜನ್ಯಕೊಳ್ಳಗಾಗುವ ಮಕ್ಕಳ ರಕ್ಷಣಾ ಕಾಯ್ದೆ ಪೋಕ್ಸೋ

Protection of Children from Abuse Act POCSO
ಸಿಂದಗಿ ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶ ಐ.ಪಿ. ನಾಯಕ ಉದ್ಘಾಟಿಸಿದರು. ಪ್ರಾಚಾರ್ಯ ವಿಮಲಕಾಂತ ಪಾಟೀಲ, ನ್ಯಾಯವಾದಿ ಎಸ್.ಬಿ. ಪಾಟೀಲ, ಎಸ್.ಬಿ. ದೊಡಮನಿ ಇತರರಿದ್ದರು.
Published on

ಸಿಂದಗಿ: ಹೆಣ್ಣು ಮಕ್ಕಳನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸುವ ಕಾಯ್ದೆಯೇ ಪೋಕ್ಸೋ ಎಂದು ಹಿರಿಯ ಸಿವ್ಹಿಲ್ ಮತ್ತು ಜೆಎಂಎ್ಸಿ ನ್ಯಾಯಾಧೀಶ ಐ.ಪಿ. ನಾಯಕ ಹೇಳಿದರು.

ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಆರ್.ಡಿ. ಪಾಟೀಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಪೋಕ್ಸೋ ಕಾಯ್ದೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಕಾಯ್ದೆಯಡಿ ಮಾಡಿದ ಅಪರಾಧಕ್ಕೆ ಜಾಮೀನು ಇಲ್ಲ. ದೌರ್ಜನ್ಯಕ್ಕೊಳಗಾದ ಮಕ್ಕಳು ತನ್ನ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯ ಕುರಿತು ದೂರು ನೀಡಿದರೆ ಸಾಕು. ಇದಕ್ಕೆ ಯಾವುದೇ ಸಾಕ್ಷಿಗಳ ಅವಶ್ಯಕತೆಯಿಲ್ಲ. ಹದಿನೆಂಟು ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಕನಿಷ್ಠ 20 ವರ್ಷದ ಕಠಿಣ ಶಿಕ್ಷೆಯಿದೆ. ಇಂತಹ ಕಾನೂನು ಅರಿತು ನಾವು ನೀವು, ಕಾನೂನಿನ ನೆರವು ಪಡೆಯಬೇಕು ಎಂದರು.

ಪೋಕ್ಸೋ ಕಾಯ್ದೆ ಕುರಿತು ನ್ಯಾಯವಾದಿ ಎಸ್.ಬಿ. ಪಾಟೀಲ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ, ಸಹಾಯಕ ಸರ್ಕಾರಿ ವಕೀಲ ಆನಂದ ರಾಠೋಡ, ಅಪರ ಸರ್ಕಾರಿ ವಕೀಲ ಎಂ.ಎಸ್. ಪಾಟೀಲ ಹಾಗೂ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿದರು.

ಉಪನ್ಯಾಸಕ ಬಿ.ಎಂ. ಸಿಂಗನಳ್ಳಿ, ಪಿ.ವಿ. ಮಹಲಿನಮಠ, ಎನ್.ಬಿ. ಪೂಜಾರಿ, ಗವಿಸಿದ್ದಪ್ಪ ಆನೆಗುಂದಿ, ಎಸ್.ಆರ್. ಬೂದಿಹಾಳ, ವಿ.ಪಿ. ನಂದಿಕೋಲ, ಎಸ್.ಎಚ್. ಜಾಧವ, ವಿ.ಕೆ. ಹಿರೇಮಠ, ಎಂ.ಐ. ಮುಜಾವರ, ರೋಹಿತ ಸುಲ್ಪಿ, ನವೀನ್ ಶೆಳ್ಳಗಿ, ಸಂಗಮೇಶ ಚಾವರ, ಆರ್.ಎಂ. ಕೊಳ್ಳೂರೆ, ನೀಲಕಂಠ ಮೇತ್ರಿ, ರಾಹುಲ ನಾರಾಯಣಕರ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net