

ಚಿತ್ರದುರ್ಗ:ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣ ತಡೆಗಟ್ಟುವುದರ ಜತೆಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿ ಕಾರಿಗಳಿಗೆ ಸೂಚಿಸಿದರು. ಡಿಸಿ ಕಚೇರಿಯಲ್ಲಿ ಸೋಮವಾರ 2020ನೇ ಸಾಲಿನ 4ನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸ ಮಿತಿ ಸಭೆಯಲ್ಲಿ ಮಾತನಾಡಿ,ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ವಿಧಿಸುವ ದಂಡನೆ ಮತ್ತು ಶಿಕ್ಷೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತಾ ಮಾತನಾಡಿ,2020ರ ಜುಲೈ 1ರಿಂದ ನ.15ರವರೆಗೆ ಪರಿಶಿಷ್ಟ ಜಾತಿಯ 22 ಪ್ರಕರಣಗ ಳು,ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳ ಸಹಿತ 24 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು,ನೊಂದವರಿಗೆ 26.30 ಲಕ್ಷ ರೂ.ಪರಿ ಹಾರ ನೀಡಲಾಗಿದೆ. 3 ಕೊಲೆ ಪ್ರಕರಣಗಳಡಿ,ನೊಂದ ಕುಟುಂಬದವರಿಗೆ 12.37ಲಕ್ಷ ರೂ.ಹಾಗೂ 1 ಅತ್ಯಾಚಾರ ಪ್ರಕರಣಕ್ಕೆ ಸಂಬಂ ಧಿಸಿದಂತೆ 4.93 ರೂ.,20 ಜಾತಿ ನಿಂದನೆ,ಗುಂಪು ಘರ್ಷಣೆಗೆ ಸಂಬಂಧಿಸಿ 9 ಲಕ್ಷ ರೂ.ಪರಿಹಾರ ಮಂಜೂರಾಗಿದೆ ಎಂದರು.
ನಿವೃತ್ತಿ ಹಾಗೂ ವರ್ಗಾ ವಣೆ ಹಿನ್ನೆಲೆಯಲ್ಲಿ ತೆರವಾಗಿರುವ ಸಮಿತಿ ಸದಸ್ಯರ ಎರಡು ಸ್ಥಾನಗಳಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಜಿ.ರೇಖಾ ಹಾಗೂ ಮಹಿಳಾ,ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜನಾಯ್ಕರನ್ನು ನಾಮನಿರ್ದೇಶನ ಮಾಡಿ ಸಭೆ ಅನುಮೋದಿಸಿತು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಜಿಪಂ ಸಿಇಒ ಟಿ.ಯೋಗೇಶ್,ಎಸ್ಪಿ ಜಿ.ರಾಧಿಕಾ,ಸಮಿತಿ ಸದಸ್ಯರಾದ ರಾಜಪ್ಪ,ನರೇನಹಳ್ಳಿ ಅರುಣ್‌ಕುಮಾರ್,ಫಾದರ್‌ರಾಜು,ಕೃಷ್ಣಪ್ಪ,ಬೋರಯ್ಯ,ಸಿದ್ದಮ್ಮ,ಭಕ್ತ ಪ್ರಹ್ಲಾದ್ ಹಾಗೂ ಅಧಿಕಾರಿಗಳಿದ್ದರು.