

ಸವದತ್ತಿ: ಮಹಿಳಾ ಹಕ್ಕುಗಳ ಉಲ್ಲಂನೆ ವಿರುದ್ಧ ಧ್ವನಿ ಎತ್ತಲು ಮಹಿಳೆಯರಿಗೆ ಕಾನೂನಿನ ಅರಿವು ಇರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಡಾ. ಅಧ್ಯೆ ನಾಗಲಕ್ಷಿ$್ಮ ಚೌಧರಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ, ಬೆಳಗಾವಿ ಶಿಶು ಅಭಿವದ್ಧಿ ಯೋಜನೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಎದುರಿಸುವ ಸಾಕಷ್ಟು ದೌರ್ಜನ್ಯಗಳು ಕಾನೂನು ಅರಿವಿನ ಕೊರತೆಯಿಂದ ಹೆಚ್ಚು ಚರ್ಚೆಗೆ ಬರುವುದಿಲ್ಲ. ಶೋಷಣೆ ಪ್ರಶ್ನಿಸುವಂತೆ ಮಹಿಳೆಯರಲ್ಲಿ ಕಾನೂನು ಜಾಗತಿ ಮೂಡಿಸಬೇಕಾಗಿದೆ ಎಂದರು.
ನ್ಯಾಯಾಧೀಶೆ ರೇಣುಕಾ ತೋಟಗಿ ಮಾತನಾಡಿ, ಮಹಿಳೆಯರ ಶೋಷಣೆ ತಡೆಗೆ ನಿರಂತರ ಧ್ವನಿ ಎತ್ತುತ್ತಿದ್ದರೂ ನಿಲ್ಲುತ್ತಿಲ್ಲ. ಮಹಿಳೆಯರಿಗೆ ಶಿಣ ದೊರೆಯಬೇಕು. ಆಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದರು. ತಾಪಂ ಇಒ ಯಶವಂತಕುಮಾರ, ೇತ್ರ ಶಿಣಾಧಿಕಾರಿ ಮೋಹನ ದಂಡಿನ, ಸಿಡಿಪಿಒ ಸುನೀತಾ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಆರ್.ಆರ್. ಕುಲಕರ್ಣಿ, ಶಕುಂತಲಾ ಅಜ್ಜಣ್ಣವರ, ಅಣ್ಣಪ್ಪ ಹೆಗಡಿ, ಎಂ.ಜಿ. ಬಡಿಗೇರ, ರೇಣುಕಾ ಅಸುಂಡಿ ಗ್ರಾಪಂ ಮಹಿಳಾ ಅಧ್ಯರು, ಉಪಾಧ್ಯರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.