ದೌರ್ಜನ್ಯ ಎಸಗಿದ ದುಷ್ಟರಿಗೆ ಕಠಿಣ ಶಿಕ್ಷೆ ವಿಧಿಸಿ

manipur protest
Published on

ಬೀದರ್: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್ ವೃತ್ತದಲ್ಲಿ ಖಂಡನಾ ಸಭೆ ನಡೆಸಿದ ನಂತರ ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿ ಮನವಿಪತ್ರ ಸಲ್ಲಿಸಿದ ವೇದಿಕೆ ಪ್ರಮುಖರು, ಮಹಿಳೆಯರನ್ನು ವಿವಸ್ತ್ರಗೊಳಿಸಿ ದೈಹಿಕ ಮತ್ತು ಲೈಂಗಿಕವಾಗಿ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಿರುವ ದುಷ್ಟರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು, ಮಾತೆ ಸತ್ಯಾದೇವಿ, ಶ್ರೀ ಗಂಗಾಧರ ಸ್ವಾಮೀಜಿ ಲಾಡಗೇರಿ, ನೆಲ್ಸನ್ ಸುಮಿತ್ರಾ, ಜಯಪಾಲ್, ವೇದಿಕೆ ಸಂಚಾಲಕ ಓಂಪ್ರಕಾಶ ರೊಟ್ಟೆ, ಸಹ ಸಂಚಾಲಕ ಜಗದೀಶ್ವರ ಬಿರಾದಾರ್, ಪ್ರಮುಖರಾದ ಡಾ.ಅಬ್ದುಲ್ ಖದೀರ್, ಬಾಬು ಪಾಸ್ವಾನ್, ಅನೀಲಕುಮಾರ ಬೆಲ್ದಾರ್, ಡಿ.ನಿಜಾಮುದ್ದಿನ್, ಸಂಜಯ ಜಾಗೀರದಾರ್, ಗಂಗಮ್ಮಾ ಫುಲೆ, ವಿನೋದ ರತ್ನಾಕರ್ ಇತರರಿದ್ದರು.
ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆ ಮಣಿಪುರದಲ್ಲಿ ನಡೆದಿದೆ. ಇದಕ್ಕೆ ಕಾರಣರಾದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net