

ಮೈಸೂರು: ನಗರದ ಪತ್ರಕರ್ತ ಭವನದಲ್ಲಿ ದೊಡ್ಡಹಟ್ಟಿ ಬೋರೇಗೌಡ ಚಲನಚಿತ್ರದ ಪೋಸ್ಟರ್ ಸೋಮವಾರ ಬಿಡುಗಡೆಗೊಂಡಿತು.
ಈ ಸಿನಿಮಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಬಹುಮಾನ ಗಳಿಸಿರುವುದು ಸಂತಸದ ಸಂಗತಿಯಾಗಿದೆ. ಸರ್ಕಾರ ಏನೇ ಸೌಲಭ್ಯ ನೀಡಿದರೂ ಅವು ಸಾಮಾನ್ಯರನ್ನು ಹೇಗೆ ತಲುಪುತ್ತವೆ ಎಂಬ ಸತ್ಯಕ್ಕೆ ಈ ಚಲನಚಿತ್ರ ಕನ್ನಡಿ ಹಿಡಿದಿದೆ ಎಂದು ಸಾಹಿತಿ ಬನ್ನೂರು ರಾಜು ಹೇಳಿದರು.
ಚಿತ್ರ ಬಿಡುಗಡೆಗೆ ನೆರವು ನೀಡಿರುವ ಅನ್ನಪೂರ್ಣ ವೆಂಕಟೇಶ್ ಮಾತನಾಡಿ, ಮನೆ ಕಟ್ಟಬೇಕೆಂಬುದು ಎಲ್ಲರ ಕನಸಾಗಿದೆ. ಎಂತಹ ಐಷಾರಾಮಿ ಹೊಟೇಲ್‌ಗಳಲ್ಲಿ ಇದ್ದರೂ ಸ್ವಂತ ಮನೆಯಲ್ಲಿ ಊಟ ಮಾಡಿದಾಗ ಸಿಗುವ ನೆಮ್ಮದಿ ಅಲ್ಲಿ ದೊರಕುವುದಿಲ್ಲ. ಹೀಗಾಗಿ ಉತ್ತಮ ಕಥಾವಸ್ತುವನ್ನು ಈ ಚಲನಚಿತ್ರ ಒಳಗೊಂಡಿರುವ ಕಾರಣ ತಾವು ನೆರವು ನೀಡಿದ್ದಾಗಿ ತಿಳಿಸಿದರು. ನಿರ್ದೇಶಕ ಕೆ.ಎಂ. ರಘು, ಕಲಾರತಿ ಮಹದೇವ್, ಅಭಿ, ಲೋಕೇಶ್ ಹಾಜರಿದ್ದರು.