

ಮೂಡಲಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಸಮಾಜ ಸುಧಾರಕ ಬಸವಣ್ಣನವರ ಜೀವನ ದ ಆದರ್ಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವ ಮುಖಂಡ ಸವೋತ್ತಮ ಜಾರಕಿಹೊಳಿ ಹೇಳಿದರು.
ತಾಲೂಕಿನ ಸುಣಧೋಳಿ ಗ್ರಾಮದ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಜಾರಕಿಹೊಳಿ ಕುಟುಂಬ ಸದಾ ಜತೆಗಿರುತ್ತದೆ ಎಂದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪ್ರತಿಮೆ ಮತ್ತು ಪರಿಸರ ಸ್ವಚ್ಛತೆ ಹಾಗೂ ಸಂರಕ್ಷಣೆ ಮಾಡುವುದು ಬಹುಮುಖ್ಯ ಎಂದರು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಶ್ರೀ ಮಾತನಾಡಿ, ಬಸವಣ್ಣ ಹಾಗೂ ರಾಯಣ್ಣನ ಮೂರ್ತಿಗಳೆರಡೂ ಸುಣಧೋಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದು, ಜನರ ಬದುಕಿಗೆ ಪ್ರೇರಕ ಶಕ್ತಿಗಳಾಗಲಿ ಎಂದು ಹಾರೈಸಿದರು.
ಡಾ.ಮಹಾದೇವ ಜಿಡ್ಡಿಮನಿ ಮಾತನಾಡಿದರು.ಸುಣಧೋಳಿ ಚಿದಾನಂದ ಶ್ರೀ, ಹುಲಜಯಂತಿಯ ಮಹಾಳಿಂಗರಾಯ ಮಹಾರಾಜರು, ಹಡಗಿನಾಳದ ತಪೋನಿರತ ಮುತ್ತೇಶ್ವರ ಶ್ರೀ ಆಶಿರ್ವಚನ ನೀಡಿದರು.
ಯುವಕ ಸಂಘದ ಅಧ್ಯಕ್ಷ ಸಿದ್ಧಲಿಂಗ ಅಜ್ಜಪ್ಪನ್ನವರ, ಗಣ್ಯರಾದ ಮಡೆಪ್ಪ ತೋಳಿನವರ, ಭೀಮಶಿ ಮಗದುಮ್, ಹನುಮಂತ ಗುಡ್ಲಮನಿ, ಡಾ.ಎಸ್.ಎಸ್.ಪಾಟೀಲ, ಬಸವರಾಜ ಭೂತ್ತಾಳಿ, ರಾಯಪ್ಪ ಬಾನಸಿ,
ಭೀಮಶಿ ಕಾರದಗಿ, ವಿನಾಯಕ ಕಂಠಿಕಾರ, ವಿಜಯ ಜಂಬಗಿ, ಅಡಿವೆಪ್ಪ ಅಳಗೋಡಿ, ಗಿರೀಶ ಹಳ್ಳೂರ, ಶ್ರೀಕಾಂತ ದೇವರಮನಿ, ಮುತ್ತು ಜಿಡಿಮನ್ನಿ, ಮಹಾಂತೇಶ ಅಂದಾನಿ ಇತರರು ಇದ್ದರು.