ದೊಡ್ಡಮ್ಮದೇವಿ ಉತ್ಸವ

kdr rangali ratha
ಕಡೂರು ತಾಲೂಕಿನ ತಂಗಲಿಯ ದೊಡ್ಡಮ್ಮದೇವಿ ರಥೋತ್ಸವ ನಡೆಯಿತು.
Published on

ಕಡೂರು: ತಂಗಲಿಯ ದೊಡ್ಡಮ್ಮದೇವಿ ರಥೋತ್ಸವ ಶುಕ್ರವಾರ ನೆರವೇರಿತು.

ಬೆಳಗ್ಗೆ ದೇವಸ್ಥಾನದಲ್ಲಿ ದೊಡ್ಡಮ್ಮ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಪೂಜೆಗಳು ನೆರವೇರಿದ ನಂತರ ದೇವಿಯ ಉತ್ಸವಮೂರ್ತಿಯನ್ನು ಅಲಂಕತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಬಾಳೆಹಣ್ಣನ್ನು ರಥದ ಕಲಶಕ್ಕೆ ಎಸೆದು ಹರಕೆ ತೀರಿಸಿದರು. ರಥದ ಚಕ್ರಕ್ಕೆ ತೆಂಗಿನ ಕಾಯಿಗಳನ್ನು ಭಕ್ತರು ಒಡೆದ ನಂತರ ಬಲಿಪೂಜೆ ಸಲ್ಲಿಸಲಾಯಿತು. ರಥದಲ್ಲಿರುವ ದೊಡ್ಡಮ್ಮ ದೇವಿಗೆ ಮಂಗಳಾರತಿ ನಡೆದು ತೆರೆ ಸರಿದ ಕೂಡಲೇ ಭಕ್ತರು ಉತ್ಸಾಹದಿಂದ ರಥವನ್ನೆಳೆದು ಸಂಭ್ರಮಿಸಿದರು. ನಂತರ ರೈತರು ಸಿಂಗರಿಸಿದ ಎತ್ತುಗಳೊಂದಿಗೆ ಪಾನಕದ ಗಾಡಿಗಳನ್ನು ರಥದ ಸುತ್ತ ಓಡಿಸಿ ನೆರೆದವರಿಗೆ ಪಾನಕ ವಿತರಿಸಿದರು. ತಂಗಲಿ ಗ್ರಾಮದ ಎಲ್ಲ ಸಮುದಾಯಗಳ ಗುಡಿಗೌಡರು, ಗ್ರಾಮದ ಮುಖ್ಯಸ್ಥರು ಇದ್ದರು. ರಾತ್ರಿ ಸಿರಗುಪ್ಪದ ಧಾತ್ರಿ ರಂಗಸಂಸ್ಥೆ ಕಲಾವಿದರಿಂದ ಶ್ರೀಕಷ್ಣ ಸಂಧಾನ ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net