ದೊಡ್ಡಮ್ಮ ದೇವಾಲಯದಲ್ಲಿ ಗೌರಿ ಪೂಜೆ

30ark4
ಅರಕಲಗೂಡು ಗ್ರಾಮದೇವತೆ ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಬುಧವಾರ ಗೌರಿ ಹಬ್ಬದ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಪೂಜಿ ಸಲ್ಲಿಸಲಾಯಿತು.
Published on

ಅರಕಲಗೂಡು: ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಮ್ಮ ದೇವಾಲಯದಲ್ಲಿ ಗೌರಿ ಹಬ್ಬದ ಅಂಗವಾಗಿ ಬುಧವಾರ ವಿಶೇಷ ಅಲಂಕಾರ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಅರಿಶಿಣ ಕುಂಕುಮ ಅಲಂಕಾರ ಮಾಡಿ ಮಹಾಮಂಗಳಾರತಿ ಸಲ್ಲಿಸಲಾಯಿತು. ದೇವಾಲಯದಲ್ಲಿ ಗೌರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಅಲಂಕರಿಸಿದ್ದು, ಭಕ್ತರ ಮನ ಸೆಳೆಯಿತು. ಹಣ್ಣು, ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಗೌರಿ ಪ್ರತಿಷ್ಠಾಪಿಸಿ ಪೂಜೆ: ಪಟ್ಟಣದ ಕೋಟೆ ಕೋದಂಡರಾಮ ದೇವಾಲಯದಲ್ಲಿ ಗೌರಿ ಹಬ್ಬದ ಅಂಗವಾಗಿ ಮಹಿಳೆಯರು ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು.

ವ್ಯಾಪಾರ ಬಲು ಜೋರು: ಗೌರಿ ಹಬ್ಬದ ದಿನವಾದ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯಿತು. ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಆವರಿಸಿ ಗಣೇಶ ಮೂರ್ತಿಗಳ ವ್ಯಾಪಾರ ಅಷ್ಟಾಗಿ ಇರಲಿಲ್ಲ. ಈ ಸಲ ಗಣಪತಿ ಮೂರ್ತಿ ಖರೀದಿಗೆ ಯುವಕರು ಆಸಕ್ತಿ ವಹಿಸಿದ್ದು, ವ್ಯಾಪಾರದ ಭರಾಟೆ ಜೋರಾಗಿತ್ತು. ಸೇವಂತಿಗೆ ಹೂವು ಒಂದು ಮಾರಿಗೆ 100ರಿಂದ 130 ರೂ.ರವರೆಗೆ ಮಾರಾಟವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net