ದೊಡ್ಡಮ್ಮ ದೇವರ ದೇಗುಲದ ಹುಂಡಿ ಕದ್ದೊಯ್ದ ಕಳ್ಳರು!

ದೊಡ್ಡಮ್ಮ ದೇವರ ದೇಗುಲದ ಹುಂಡಿ ಕದ್ದೊಯ್ದ ಕಳ್ಳರು!
Published on

ಬೇಲೂರು: ದೇಗುದಲ್ಲಿದ್ದ ಹುಂಡಿ ಕದ್ದೊಯ್ದ ಕಳ್ಳರು, ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನೆಲ್ಲ ದೋಚಿ ಕಾಲಿ ಹುಂಡಿಯನ್ನು ಬಿಸಾಕಿ ಹೋಗಿರುವ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಅಂಬೇಡ್ಕರ್ ನಗರದ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.


ಬೇಲೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಿಕ್ಕಮ್ಮ ದೊಡ್ಡಮ್ಮ ದೇವರ ದೇಗುಲದಲ್ಲಿ ಎಂದಿನಂತೆ ಅರ್ಚಕ ಬುಧವಾರ ಸಂಜೆ ಪೂಜೆ ಸಲ್ಲಿಸಿ ಮುಂಭಾಗಿಲಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಆದರೆ ಗುರುವಾರ ಬೆಳಗಿನ 2 ರಿಂದ 3 ಗಂಟೆ ಸಮಯದಲ್ಲಿ ಕಳ್ಳರು ದೇಗುಲದ ಭಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ್ಳ ನುಗ್ಗಿ ಗರ್ಭಗುಡಿ ಮುಂಭಾಗದಲ್ಲಿದ್ದ ಹುಂಡಿ ಕದ್ದೊಯ್ದು, ಅಂಬೇಡ್ಕರ್ ನಗರದ ವಿಜಯ ರೈಸ್ ಮಿಲ್ ಹಿಂಭಾಗಕ್ಕೆ ತೆರಳಿ ಹಿಂಬಾಗದಲ್ಲಿದ್ದ ಕೊಠಡಿಯೊಂದರ ಬೀಗ ಹೊಡೆದು ಅಲ್ಲಿದ್ದ ಹಾರೆ ಮತ್ತು ಮಚ್ಚಿನಿಂದ ಹುಂಡಿ ಬೀಗ ಹೊಡೆದು ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಿಮಿಸಿದ ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡು ಸ್ಥಳಿಯವಾಗಿದ್ದ ಸಿಸಿ ಟಿವಿ ಪರಿಶೀಲಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net